ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಲಾಕ್‌ಡೌನ್‌ ಬಳಿಕವೂ ಹೆಚ್ಚುತ್ತಿರುವ ಸೋಂಕು, 28,395 ಹೊಸ ಪ್ರಕರಣ

Last Updated 21 ಏಪ್ರಿಲ್ 2021, 5:20 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಲಾಕ್‌ಡೌನ್‌ ಹೇರಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಮಂಗಳವಾರ ಕೊರೊನಾ ಸೋಂಕಿತರ ಸಂಖ್ಯೆ 28,395 ತಲುಪಿದ್ದು, ಒಟ್ಟು 277 ಜನ ಸಾವಿಗೀಡಾಗಿದ್ದಾರೆ.

15 ದಿನಗಳಿಂದ ನಗರದದ್ಯಂತ ರಾತ್ರಿ ಕರ್ಫ್ಯೂ ಹೇರಲಾಗುತ್ತಿದ್ದು, ಕಳೆದ ಶನಿವಾರದಿಂದ ವಾರಾಂತ್ಯದ ಕರ್ಫ್ಯೂ ಕೂಡ ಜಾರಿಯಲ್ಲಿತ್ತು. ಮಂಗಳವಾರದಿಂದ ಒಂದು ವಾರದ ಅವಧಿಯ ಲಾಕ್‌ಡೌನ್‌ ಸಹ ಘೋಷಿಸಲಾಗಿದೆ. ಆದರೂ ಕೊರೊನಾ ಸೋಂಕಿತರ ಪ್ರಮಾಣ ತಹಬದಿಗೆ ಬಂದಿಲ್ಲ.

ಮಂಗಳವಾರ ಸಂಜೆಗೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ಒಟ್ಟು 86,526 ಜನ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಈ ಪೈಕಿ ಶೇ 32.82ರಷ್ಟು ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇತ್ತೀಚಿನ ದಿನಗಳಲ್ಲೇ ಇದು ಅಧಿಕ ಪ್ರಮಾಣವಾಗಿದೆ.

ಏತನ್ಮಧ್ಯೆ 19,430 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗಳಿಗೆ ತೆರಳಿದ್ದು, ಇನ್ನೂ 85,575 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ದೆಹಲಿಯಲ್ಲಿ ಒಟ್ಟು 9,05,541 ಜನರು ಸೋಂಕಿಗೆ ಒಳಗಾಗಿದ್ದು, 12,638 ಜನ ಸಾವಿಗೀಡಾಗಿದ್ದಾರೆ.

3 ಲಕ್ಷದ ಸಮೀಪ ಸೊಂಕಿತರ ಸಂಖ್ಯೆ:
ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,94,115 ಜನ ಸೋಂಕಿತರಾಗಿದ್ದಾರೆ.

ಇದೇ ವೇಳೆ ಚಿಕಿತ್ಸೆಗೆ ಸ್ಪಂದಿಸದೆ 2,020 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT