ಶನಿವಾರ, ಅಕ್ಟೋಬರ್ 23, 2021
22 °C

Covid-19 India Update: 28,326 ಹೊಸ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಹೊಸದಾಗಿ ಒಂದೇ ದಿನ 28,326 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಪ್ರಕರಣಗಳ ಸಂಖ್ಯೆ 3,36,52,745ಕ್ಕೆ ಏರಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ವಿವರಗಳಂತೆ, ಹೊಸದಾಗಿ 260 ಮಂದಿ ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆಯು 4,46,918 ತಲುಪಿದೆ.

ಸದ್ಯ, ಸಕ್ರಿಯ ಪ್ರಕರಣಗಳ ಸಂಖ್ಯೆ 3,03,476ಕ್ಕೆ ಏರಿಕೆಯಾಗಿದ್ದು, ಇದು ಒಟ್ಟು ಪ್ರಕರಣಗಳ ಶೇ 0.96 ರಷ್ಟಿದೆ. ಚೇತರಿಕೆಯ ಪ್ರಮಾಣವು ಶೇ 97.77 ರಷ್ಟಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.   

ಕಳೆದ 24 ಗಂಟೆಗಳಲ್ಲಿ 2,034 ಪ್ರಕರಣಗಳು ಹೆಚ್ಚಳವಾಗಿವೆ. ದೈನಿಕ ದೃಢೀಕರಣ ಪ್ರಮಾಣ ಶೇ 1.90 ದಾಖಲಾಗಿದೆ. ಕಳೆದ 27 ದಿನಗಳಲ್ಲಿ ಇದು ಶೇ 3 ಕ್ಕಿಂತ ಕಡಿಮೆ ಇದೆ. 

ಕೋವಿಡ್‌ ಸೋಂಕಿನ ಈ ವಾರದ ದೃಢೀಕರಣ ಪ್ರಮಾಣ ಶೇ 1.98 ಇದೆ. ಕಳೆದ 93 ದಿನಗಳಲ್ಲಿ ಇದು ಶೇ 3ಕ್ಕಿಂತ ಕಡಿಮೆ ಇದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು