ಸೋಮವಾರ, ಜುಲೈ 4, 2022
24 °C

Covid Updates India: 2,927 ಹೊಸ ಪ್ರಕರಣಗಳು ದೃಢ, 32 ಮಂದಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರದಲ್ಲಿ ಬುಧವಾರ ಒಂದೇ ದಿನ 2,927 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಕೋವಿಡ್‌ ಕಾರಣದಿಂದ 32 ಮಂದಿ ಮೃತ ಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಬುಧವಾರ ಮೃತಪಟ್ಟವರ ಪೈಕಿ ಕೇರಳದ 26, ಮಹಾರಾಷ್ಟ್ರದ 4 ಮಂದಿ ಸೇರಿದ್ದಾರೆ. ದೆಹಲಿ ಹಾಗೂ ಮಿಜೋರಾಂನಲ್ಲಿ ತಲಾ 1 ಸಾವು ಸಂಭವಿಸಿದೆ.

ದೇಶದಲ್ಲಿ ಇದುವರೆಗಿನ ಕೋವಿಡ್‌ ಪ್ರಕರಣಗಳ ಸಂಖ್ಯೆ 4,30,65,496 ಕ್ಕೆ ತಲುಪಿದೆ. ಈ ಪೈಕಿ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 16,279 ಆಗಿದೆ.

ಕೋವಿಡ್‌ ಕಾರಣದಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 5,23,654 ಕ್ಕೆ ತಲುಪಿದೆ.

ಕೋವಿಡ್‌ ಕಾರಣದಿಂದ ಅತಿಹೆಚ್ಚು ಸಾವು ಸಂಭವಿಸಿದ ರಾಜ್ಯಗಳ ಪಟ್ಟಿ
1. ಮಹಾರಾಷ್ಟ್ರ - 1,47,838
2. ಕೇರಳ - 68,916
3. ಕರ್ನಾಟಕ - 40,057
4. ತಮಿಳುನಾಡು - 38,025
5. ದೆಹಲಿ - 26,169
6. ಉತ್ತರ ಪ್ರದೇಶ - 23,505
7. ಪಶ್ಚಿಮ ಬಂಗಾಳ - 21,201

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು