ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೈಸೆಲ್ವಿ ಸಿಎಸ್‌ಐಆರ್‌ನ ಮೊದಲ ಮಹಿಳಾ ಮಹಾ ನಿರ್ದೇಶಕಿ

Last Updated 7 ಆಗಸ್ಟ್ 2022, 11:04 IST
ಅಕ್ಷರ ಗಾತ್ರ

ನವದೆಹಲಿ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ(ಸಿಎಸ್‌ಐಆರ್‌) ಮೊಟ್ಟ ಮೊದಲ ಮಹಿಳಾ ಮಹಾ ನಿರ್ದೇಶಕಿಯಾಗಿ ಹಿರಿಯ ವಿಜ್ಞಾನಿ ನಲ್ಲಥಂಬಿ ಕಲೈಸೆಲ್ವಿ ಅವರು ನೇಮಕಗೊಂಡಿದ್ದಾರೆ. ಸಿಎಸ್ಐಆರ್‌ ದೇಶದಾದ್ಯಂತ ಇರುವ 38 ಸಂಶೋಧನಾ ಸಂಸ್ಥೆಗಳನ್ನು ಒಳಗೊಂಡ ಒಕ್ಕೂಟವಾಗಿದೆ.

ಅಧಿಕಾರ ವಹಿಸಿಕೊಂಡ ದಿನದಿಂದ 2 ವರ್ಷಗಳ ಅವಧಿಗೆ ಕಲೈಸೆಲ್ವಿ ಅವರು ಅಧಿಕಾರದಲ್ಲಿ ಇರಲಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯ ಶನಿವಾರ ಆದೇಶ ಹೊರಡಿಸಿದೆ.

ತಮಿಳುನಾಡಿನ ತಿರುನೆಲ್ವೇಲಿ ಮೂಲದಕಲೈಸೆಲ್ವಿ ಅವರು ಸದ್ಯ ತಮಿಳುನಾಡಿನ ಕರೈಕುಡಿಯಲ್ಲಿರುವ ಸಿಎಸ್‌ಐಆರ್‌– ಸೆಂಟ್ರಲ್‌ ಎಲೆಕ್ಟ್ರೋಕೆಮಿಕಲ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ ನ ನಿರ್ದೇಶಕಿ ಮತ್ತು ಐಎಸ್‌ಐಆರ್‌ ಇಲಾಖೆಯ ಕಾರ್ಯದರ್ಶಿಯೂ ಆಗಿರಲಿದ್ದಾರೆ. ಲೀಥಿಯಂ ಬ್ಯಾಟರಿ ಕ್ಷೇತ್ರದಲ್ಲಿ ಇವರು ಬಹಳಷ್ಟು ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT