ಶನಿವಾರ, ಏಪ್ರಿಲ್ 1, 2023
23 °C

ಶಿಕ್ಷಕರ ಸೇವೆಗೆ ಉಪರಾಷ್ಟ್ರಪತಿ ಶ್ಲಾಘನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಸೋಂಕು ಬಿಕ್ಕಟ್ಟಿನ ನಡುವೆಯೂ ಶೈಕ್ಷಣಿಕ ವರ್ಷಕ್ಕೆ ತೊಡಕಾಗದಂತೆ ಶ್ರಮಿಸುತ್ತಿರುವ ಎಲ್ಲ ಶಿಕ್ಷಕರಿಗೂ ಕೃತಜ್ಞತೆ ಸಲ್ಲಿಸುವ ದಿನವಿದು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಶಿಕ್ಷಣ ದಿನಾಚರಣೆ ಕುರಿತು ಹೇಳಿದ್ದಾರೆ.

ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು. ಅವರ ಸಮರ್ಪಣಾ ಮನೋಭಾವ, ಧೈರ್ಯ ಮತ್ತು ಸ್ವಾರ್ಥರಹಿತ ಸೇವೆಗಾಗಿ ಶಿಕ್ಷಕರಿಗೆ ನಮಿಸೋಣ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಮಾಜಿ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಅವರಿಗೂ ನಮನ ಸಲ್ಲಿಸಿದ್ದಾರೆ. ಅವರೊಬ್ಬ ಶ್ರೇಷ್ಠ ಶಿಕ್ಷಕ, ಚಿಂತಕ, ಮುತ್ಸದ್ಧಿ ಮತ್ತು ಲೇಖಕ. ಅವರ ಬದುಕು, ಸೇವೆ ಎಲ್ಲ ಭಾರತೀಯರಿಗೆ ಪ್ರೇರೇಪಣೆ ಆಗಲಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು