ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಲಭೆ ಯೋಜಿತ ದಾಳಿ; ಹೆಚ್ಚುವರಿ ಸೆಷನ್ಸ್‌ ಕೋರ್ಟ್ ಹೇಳಿಕೆ

Last Updated 12 ನವೆಂಬರ್ 2021, 10:31 IST
ಅಕ್ಷರ ಗಾತ್ರ

ನವದೆಹಲಿ: ರಾಜಧಾನಿಯಲ್ಲಿ ಕಳೆದ ವರ್ಷ ನಡೆದಿದ್ದ ಗಲಭೆಯು ‘ಯೋಜಿತ ದಾಳಿ’ ಎಂದು ಹೇಳಿರುವ ದೆಹಲಿಯ ನ್ಯಾಯಾಲಯವು, ಪ್ರಕರಣ ಕುರಿತಂತೆ ನಾಲ್ವರು ಆರೋಪಿಗಳ ವಿರುದ್ಧ ಕೊಲೆ, ದಾಂದಲೆ, ಕ್ರಿಮಿನಲ್ ಸಂಚು ನಡೆಸಿದ ಆರೋಪಗಳನ್ನು ಅಂತಿಮಗೊಳಿಸಿದೆ.

ಫೆಬ್ರುವರಿ 25, 2020ರಲ್ಲಿ ನಡೆದಿದ್ದ ಗಲಭೆಯಲ್ಲಿ ಅಂಬೇಡ್ಕರ್‌ ಕಾಲೇಜು ಬಳಿ ದೀಪಕ್ ಎಂಬವರನ್ನು ತೀವ್ರವಾಗಿ ಹಲ್ಲೆ ನಡೆಸಿ, ಕೊಲೆ ಮಾಡಲಾಗಿತ್ತು. ಅನ್ವರ್‌ ಹುಸೇನ್, ಖಾಸಿಂ, ಶಾರುಕ್‌ ಮತ್ತು ಖಲೀದ್ ಅನ್ಸಾರಿ ಪ್ರಕರಣದ ಆರೋಪಿಗಳು. ದೀಪಕ್ ರಕ್ತಸ್ರಾವದಿಂದ ಸತ್ತಿದ್ದಾರೆ ಎಂದು ಮರಣೋತ್ತರ ವರದಿ ತಿಳಿಸಿತ್ತು.

ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅಮಿತಾಬ್ ರಾವತ್‌ ಅವರು, ಆರೋಪಿಗಳ ವಿರುದ್ಧ ಅಗತ್ಯ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ಅಂತಿಮಗೊಳಿಸಿದರು. ಅವರ ವಕೀಲರ ಸಮ್ಮುಖದಲ್ಲಿ ಆರೋಪಿಗಳಿಗೆ ಸ್ಥಳೀಯ ಭಾಷೆಯಲ್ಲಿಯೇ ವಿವರಿಸಿದರು.

ನಿಯಮಬಾಹಿರವಾಗಿ ಗುಂಪುಗೂಡಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ. ಇದೊಂದು ಯೋಜಿತ ದಾಳಿಯಾಗಿದೆ ಎಂದು ನ್ಯಾಯಾಧೀಶರು ಈ ವೇಳೆ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT