ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಾಳಿ ಗುಣಮಟ್ಟ ಮತ್ತೆ ಕಳಪೆ

Last Updated 9 ನವೆಂಬರ್ 2020, 6:48 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ನೆರೆ ಹೊರೆಯ ರಾಜ್ಯಗಳ ಭತ್ತದ ಗದ್ದೆಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುತ್ತಿರುವುದರಿಂದ ಕಳೆದ ಐದು ದಿನಗಳಿಂದಲೂ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ.

ಮಹಾನಗರದ ಗಾಳಿಯ ಗುಣಮಟ್ಟ ಸೂಚ್ಯಂಕ ಸೋಮವಾರ 469 ಇದೆ. ಕಳೆದ 24ಗಂಟೆಗಳಲ್ಲಿ 416 ರಷ್ಟಿತ್ತು. ಶನಿವಾರ 427, ಶುಕ್ರವಾರ 406ರಷ್ಟಿತ್ತು.

ದೆಹಲಿಯ ನೆರೆಹೊರೆಯ ನಗರಗಳಾದ ಫರಿದಾಬಾದ್‌ (462), ಘಾಜಿಯಾಬಾದ್‌(483), ನೊಯ್ಡಾ(476), ಗ್ರೇಟರ್ ನೊಯ್ಡಾ (482) ಮತ್ತು ಗುರುಗ್ರಾಮ (475) ಗಳಲ್ಲೂ ಗಾಳಿಯ ಗುಣಮಟ್ಟ ಕಳಪೆಯಾಗಿದೆ.

ಸೂಚ್ಯಂಕ 301 ರಿಂದ 400 ಸೂಚ್ಯಂಕದ ಒಳಗಿದ್ದರೆ, ಅದು ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ಸೂಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT