ಭಾನುವಾರ, ಏಪ್ರಿಲ್ 18, 2021
24 °C

ತಿರುಮಲದ ಬಾಲಾಜಿಗೆ ₹2 ಕೋಟಿ ಮೌಲ್ಯದ ಚಿನ್ನದ ಆಭರಣ ಅರ್ಪಿಸಿದ ತಮಿಳುನಾಡಿನ ಭಕ್ತ

ಪಿಟಿಐ Updated:

ಅಕ್ಷರ ಗಾತ್ರ : | |

ತಿರುಪತಿ ವೆಂಕಟೇಶ್ವರ ದೇವಸ್ಥಾನ–ಸಾಂದರ್ಭಿಕ ಚಿತ್ರ

ತಿರುಪತಿ (ಆಂಧ್ರ ಪ್ರದೇಶ): ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ ತಮಿಳುನಾಡು ಮೂಲದ ಭಕ್ತರೊಬ್ಬರು ₹2 ಕೋಟಿ ಮೌಲ್ಯದ ಚಿನ್ನದ ಆಭರಣಗಳನ್ನು ಅರ್ಪಿಸಿದ್ದಾರೆ.

ತಮಿಳುನಾಡಿನ ಥೇನಿಯ ಭಕ್ತ ಥಂಗದೊರೈ ಪೂಜೆಯ ಬಳಿಕ ಚಿನ್ನದ ಶಂಕು ಮತ್ತು ಚಕ್ರವನ್ನು ದೇವಾಲಯದ ಆಡಳಿತ ಮಂಡಳಿಗೆ ನೀಡಿದ್ದಾರೆ. ಚಿನ್ನದ ಕಾಣಿಕೆಗಳ ತೂಕ 3.5 ಕೆ.ಜಿ. ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌–19 ಲಾಕ್‌ಡೌನ್‌ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಭಕ್ತಾದಿಯು ಗುಣಮುಖರಾಗಲು ಪ್ರಾರ್ಥನೆ ಸಲ್ಲಿಸಿ, ಚಿನ್ನದ ಆಭರಣಗಳನ್ನು ಅರ್ಪಿಸುವ ಹರಕೆಯೊತ್ತಿದ್ದರು. ಅವರು ಗುಣಮುಖರಾಗಿದ್ದು, ಹರಕೆ ತೀರಿಸುವ ಸಲುವಾಗಿ ಇದನ್ನು ಅರ್ಪಿಸಿದ್ದಾರೆ ಎಂದು ಭಕ್ತಾದಿ ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು