ಶನಿವಾರ, ಸೆಪ್ಟೆಂಬರ್ 18, 2021
23 °C

ಹೆಲಿಕಾಪ್ಟರ್ ಪತನ ಪ್ರಕರಣ: ಒಬ್ಬ ಪೈಲಟ್‌ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜಮ್ಮುವಿನ ಗಡಿಭಾಗದ ರಾಜ್‌ನೀತ್‌ ಸಾಗರ್‌ ಅಣೆಕಟ್ಟೆಯಲ್ಲಿ ಪತನಗೊಂಡಿದ್ದ ಸೇನೆಯ ಹೆಲಿಕಾಪ್ಟರ್‌ನ ಪೈಲಟ್ ಒಬ್ಬರ ಶವ ಅಪಘಾತವಾದ 12 ದಿನದ ನಂತರ ಭಾನುವಾರ ಪತ್ತೆಯಾಗಿದೆ. ಇನ್ನೊಬ್ಬ ಪೈಲಟ್‌ ಪತ್ತೆ ಶೋಧ ಮುಂದುವರಿದಿದೆ.

ಲೆಫ್ಟಿನಂಟ್ ಕರ್ನಲ್‌ ಎ.ಎಸ್.ಬಾತ್ ಅವರ ಶವವು ಅಣೆಕಟ್ಟೆಯ 75.9 ಮೀಟರ್‌ ಆಳದಲ್ಲಿ ಪತ್ತೆಯಾಯಿತು ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ಪೈಲಟ್‌ಗಳಿದ್ದ ಹೆಲಿಕಾಪ್ಟರ್ ಆ. 3ರಂದು ಅಣೆಕಟ್ಟೆಯಲ್ಲಿ ಪತನಗೊಂಡಿತ್ತು.

ನಾಪತ್ತೆಯಾಗಿದ್ದ ಪೈಲಟ್‌ಗಳ ಪತ್ತೆಗೆ ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ರಾಜ್ಯ ಪೊಲೀಸ್‌ ಪಡೆಯ ಸಿಬ್ಬಂದಿ ಜಂಟಿಯಾಗಿ ಸುಮಾರು 500 ಅಡಿ ಆಳದ ಅಣೆಕಟ್ಟೆಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.