ಶ್ರೀನಗರ:ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಜುಲೈ 18ರಂದು ನಡೆದಿದ್ದ ‘ನಕಲಿ’ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ಮೂವರು ವ್ಯಕ್ತಿಗಳಡಿಎನ್‌ಎ–ಪೋಷಕರ ಡಿಎನ್‌ಎ ಮಾದರಿ ಹೊಂದಿಕೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರಜೌರಿಯಲ್ಲಿ ಮೃತರಾಗಿದ್ದ ಮೂವರು ವ್ಯಕ್ತಿಗಳ ಡಿಎನ್‌ಎ ವರದಿ ಬಂದಿದ್ದು, ಪೋಷಕರೊಂದಿಗೆ ಹೊಂದಿಕೆಯಾಗಿದೆ. ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ’ ಎಂದು ಐಜಿಪಿ ವಿಜಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೂವರು ಅಪರಿಚಿತ ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ ಎಂದು ಸೇನೆ ಜುಲೈ 18 ರಂದು ತಿಳಿಸಿತ್ತು. ‘ಈ ಎನ್‌ಕೌಂಟರ್ ಕಾರ್ಯಾಚರಣೆಯ ವೇಳೆ ಯೋಧರು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಡಿ
(ಎಎಫ್‌ಎಸ್‌ಪಿಎ) ನೀಡಲಾಗಿರುವ ಅಧಿಕಾರವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ’ ಎಂದು ಭಾರತೀಯ ಸೇನೆ ನಂತರ ಹೇಳಿಕೆ ನೀಡಿತ್ತು.

ಪ್ರಕರಣವೇನು?: ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್ ಬಳಿಕ, ಶೋಪಿಯಾನ್‌ನ ಸೇಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಕುಟುಂಬದ ಸದಸ್ಯರು ಕಾಣೆಯಾಗಿದ್ದಾರೆ ಎಂದು, ರಜೌರಿಯಲ್ಲಿ ಮೂರು ಕುಟುಂಬಗಳು ಪೊಲೀಸರಿಗೆ ದೂರು ನೀಡಿದ್ದವು. ಬ್ರಾರ್ ಅಹ್ಮದ್ ಖಾನ್ (18), ಇಮ್ತಿಯಾಜ್ ಹುಸೈನ್ (26) ಹಾಗೂ ಮೊಹಮ್ಮದ್ ಇಬ್ರಾರ್ (21) ಕಾಣೆಯಾದವರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನಂತರದಲ್ಲಿ ಈ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಪರಿಚಿತ ಶಂಕಿತ ಉಗ್ರರ ಡಿಎನ್‌ಎ ಜೊತೆ ಹೋಲಿಸಲು, ಕುಟುಂಬ ಸದಸ್ಯರ ಡಿಎನ್‌ಎ ಮಾದರಿಯನ್ನು ಆ.13ರಂದು ಪಡೆಯಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.