ಶುಕ್ರವಾರ, ಜೂನ್ 18, 2021
27 °C

ಮಹಿಳೆಯ ಹೊಟ್ಟೆಯಲ್ಲಿ 24 ಕೆ.ಜಿ. ತೂಕದ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ

ಪಿಟಿಐ Updated:

ಅಕ್ಷರ ಗಾತ್ರ : | |

ಶಿಲ್ಲಾಂಗ್‌: ಮೇಘಾಲಯದ ಪಶ್ಚಿಮ ಗರೊ ಹಿಲ್ಸ್‌ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ವೈದ್ಯರು ಮಹಿಳೆಯ ಹೊಟ್ಟೆಯೊಳಗೆ ಇದ್ದ 24 ಕೆ.ಜಿ ತೂಕದ ಗಡ್ಡೆಯೊಂದನ್ನು ಶಸ್ತ್ರಚಿಕಿತ್ಸೆ ಮುಖಾಂತರ ತೆಗೆದಿದ್ದಾರೆ. 

ಹೊಟ್ಟೆನೋವಿನ ಕಾರಣ ಜುಲೈ 29ರಂದು ಪೂರ್ವ ಗರೊ ಹಿಲ್ಸ್‌ ಜಿಲ್ಲೆಯ ಜಮ್ಗೆ ಹಳ್ಳಿಯ 37 ವರ್ಷದ ಮಹಿಳೆಯೊಬ್ಬರು, ಟುರಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅವರ ಹೊಟ್ಟೆಯೊಳಗೆ ಗಡ್ಡೆ ಇರುವುದು ಪತ್ತೆಯಾಗಿದೆ.

ಆಗಸ್ಟ್‌ 3ರಂದು ಶಸ್ತ್ರಚಿಕಿತ್ಸೆ ನಡೆಸಿ ಇದನ್ನು ಹೊರತೆಗೆಯಲಾಗಿದೆ. ರೋಗಿಯ ಆರೋಗ್ಯ ಸ್ಥಿರವಾಗಿದ್ದು, ನಿಗಾ ಇರಿಸಲಾಗಿದೆ. ಕ್ಯಾನ್ಸರ್‌ ಇದೆಯೇ ಎನ್ನುವುದನ್ನು ಪತ್ತೆಹಚ್ಚಲು ಗಡ್ಡೆಯನ್ನು ಅಂಗಾಂಶ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಸೂಪರ್‌ಇಂಟೆಂಡೆಂಟ್‌ ಡಾ. ಸಂಗ್ಮ ತಿಳಿಸಿದರು.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು