ಭಾನುವಾರ, ಜನವರಿ 17, 2021
22 °C

ಶಿವಸೇನೆ ಶಾಸಕರ ಸಹಚರನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಮುಂಬೈ: ಶಿವಸೇನೆ ಶಾಸಕ ಪ್ರತಾಪ್‌ ಸರ್‌ನಾಯಕ್ ಅವರ ಸಹಚರ ಅಮಿತ್ ಚಾಂಡೋಲೆ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ಅವರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದು, ವಿಚಾರಣೆಗಾಗಿ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರುವ ಸಂಭವವಿದೆ. ಬುಧವಾರ ಅಧಿಕಾರಿಗಳು ಅಮಿತ್ ಅವರನ್ನು ವಿಚಾರಣೆಗೆ ಒಳಪಡಿಸಿದರು.

ಸರ್ ನಾಯಕ್‌ ಅವರ ವ್ಯವಹಾರದಲ್ಲಿ ಅಮಿತ್ ಪಾತ್ರ ಇರುವ ಕುರಿತು ವಿಚಾರಣೆ ನಡೆದಿದೆ. ಸರ್‌ನಾಯಕ್ ಅವರಿಗೆ ಸೇರಿದ ವಿವಿಧ ತಾಣಗಳ ಮೇಲೆ ಇ.ಡಿ ಅಧಿಕಾರರಿಗಳು ನ.24ರಂದು ದಾಳಿ ನಡೆಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು