ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್ ಸಿಎಂ ಸೊರೇನ್ ಅನರ್ಹತೆಗೆ ಚುನಾವಣಾ ಆಯೋಗ ಒಲವು: ರಾಜಭವನ ಮೂಲಗಳ ಮಾಹಿತಿ

Last Updated 25 ಆಗಸ್ಟ್ 2022, 16:08 IST
ಅಕ್ಷರ ಗಾತ್ರ

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಚುನಾವಣಾ ನೀತಿ ಉಲ್ಲಂಘನೆ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ಚುನಾವಣಾ ಆಯೋಗ ಸೂಚಿಸಿದೆ ಎಂದು ರಾಜಭವನದ ಮೂಲಗಳು ಹೇಳಿವೆ.

ಆದರೆ, ಈ ವಿಚಾರವಾಗಿ ರಾಜಭವನ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿಲ್ಲ. ರಾಂಚಿ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲರನ್ನು ಪತ್ರಕರ್ತರು ಪ್ರಶ್ನಿಸಿದ್ದು, ರಾಜಭವನ ತಲುಪಿ ಪರಿಸ್ಥಿತಿ ಅವಲೋಕಿಸದೆ ಏನೂ ಹೇಳಲಾಗದು ಎಂದು ಉತ್ತರಿಸಿದ್ದಾರೆ.

‘ನಾನು ಎರಡು ದಿನಗಳಿಂದ ದೆಹಲಿಯ ಏಮ್ಸ್‌ನಲ್ಲಿದ್ದೆ. ರಾಜಭವನಕ್ಕೆ ತೆರಳಿದ ಬಳಿಕವೇ ಪ್ರತಿಕ್ರಿಯೆ ನೀಡಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.

ಗಣಿಗಾರಿಕೆಗೆ ಗುತ್ತಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸೊರೇನ್ ಅವರನ್ನು ಶಾಸಕ ಸ್ಥಾನದಿಂದ ಅಹರ್ನಗೊಳಿಸುವಂತೆ ಚುನಾವಣಾ ಆಯೋಗ ಶಿಫಾರಸು ಮಾಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಇವುಗಳನ್ನು ಸೊರೇನ್ ಅಲ್ಲಗಳೆದಿದ್ದರು.

ಬಿಜೆಪಿ ಸಂಸದರೊಬ್ಬರು ಸೇರಿದಂತೆ ಆ ಪಕ್ಷದ ನಾಯಕರು ಮತ್ತು ಅವರ ಕೈಗೊಂಬೆಯಾಗಿರುವ ಪತ್ರಕರ್ತರು ಚುನಾವಣಾ ಆಯೋಗದ ಹೆಸರಿನಲ್ಲಿ ನಕಲಿ ವರದಿ ಸಿದ್ಧಪಡಿಸಿರಬೇಕು. ಇಲ್ಲವಾದರೆ ಅದು ಮುಚ್ಚಿದ ಲಕೋಟೆಯಲ್ಲಿರಬೇಕಿತ್ತು ಎಂದು ಸೊರೇನ್ ಹೇಳಿರುವುದಾಗಿ ಜಾರ್ಖಂಡ್‌ನ ಸಚಿವಾಲಯದ ಪ್ರಕಟಣೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT