ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ಮೆಟ್‌ ತಯಾರಿಕೆ, ಮಾರಾಟದ ಮೇಲ್ವಿಚಾರಣೆ ಅವಶ್ಯಕ: ದೆಹಲಿ ಹೈಕೋರ್ಟ್‌

Last Updated 12 ಏಪ್ರಿಲ್ 2021, 9:25 IST
ಅಕ್ಷರ ಗಾತ್ರ

ನವದೆಹಲಿ: ‘ಗ್ರಾಹಕರ ಹಿತದೃಷ್ಟಿಯಿಂದ ಹೆಲ್ಮೆಟ್‌ಗಳ ತಯಾರಿಕೆ ಮತ್ತು ಮಾರಾಟ ಸಂದರ್ಭದಲ್ಲಿ ಬ್ಯೂರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌ (ಬಿಐಎಸ್‌) ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ನಡೆಸುವ ಅಗತ್ಯವಿದೆ’ ಎಂದು ದೆಹಲಿ ಹೈಕೋರ್ಟ್‌ ಸೋಮವಾರ ತಿಳಿಸಿದೆ.

‘2019ರಿಂದ ಈವರೆಗೆ ಹೆಲ್ಮೆಟ್‌ಗಳ ತಯಾರಿಕೆ ಮತ್ತು ಅಕ್ರಮ ಮಾರಾಟದ ಕುರಿತಾಗಿ 1,400ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಆದರೂ ಬಿಐಎಸ್‌ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ವಯಂ ಸೇವಾ ಸಂಸ್ಥೆಯಾದ ಉಟ್‌ಪ್ರೆರಿಟ್ ಕನ್ಸ್ಯೂಮರ್ ಫೌಂಡೇಶನ್ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

‘ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಅವರು,‘ಇದು ಗ್ರಾಹಕರ ಸುರಕ್ಷತೆ ಮತ್ತು ಭದ್ರತೆಯ ವಿಷಯವಾಗಿದೆ. ಹಾಗಾಗಿ ಹೆಲ್ಮೆಟ್‌ ತಯಾರಿಕೆ ಮತ್ತು ಮಾರಾಟದ ಮೇಲೆ ಬಿಐಎಸ್‌ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ನಡೆಸುವುದು ಅತಿ ಅವಶ್ಯಕ’ ಎಂದು ಅವರು ಹೇಳಿದ್ದಾರೆ.

‘ಹೆಲ್ಮೆಟ್‌ ಬಗ್ಗೆ ಎನ್‌ಜಿಒ ನೀಡಿರುವ ದೂರುಗಳನ್ನು ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳಿ. ಜತೆಗೆ ಐಎಸ್‌ಐ ಮಾರ್ಕ್‌ ದುರುಪಯೋಗ ಆಗದಂತೆ ನೋಡಿಕೊಳ್ಳಿ’ ಎಂದು ನ್ಯಾಯಾಲಯವು ಬಿಐಎಸ್‌ಗೆ ನಿರ್ದೇಶನ ನೀಡಿದೆ. ಅಲ್ಲದೆ ಈ ಬಗ್ಗೆ ವರದಿ ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿದೆ.

‘ಕೆಲವು ಕಂಪನಿ ಮತ್ತು ತಯಾರಕರು ಕಾನೂನು ಬಾಹಿರವಾಗಿ ಹೆಲ್ಮೆಟ್‌ ತಯಾರಿಸುತ್ತಿದ್ದಾರೆ. ಪರವಾನಗಿ ಇಲ್ಲದಿದ್ದರೂ ವಿವಿಧ ಬಗೆಯ ಹೆಲ್ಮೆಟ್‌ಗಳನ್ನು ತಯಾರಿಸಿ, ಜನರಿಗೆ ಮೋಸ ಮಾಡುತ್ತಿದ್ದಾರೆ. ಕೆಲವು ತಯಾರಕರಿಗೆ ಐಎಸ್‌ಐ ಮಾರ್ಕ್‌ ಬಳಸಲು ಅನುಮತಿ ಇಲ್ಲದಿದ್ದರೂ, ತಮ್ಮ ಹೆಲ್ಮೆಟ್‌ಗಳಲ್ಲಿ ಐಎಸ್‌ಐ ಮಾರ್ಕ್‌ ಅನ್ನು ಬಳಸುತ್ತಿದ್ದಾರೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT