ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FactCheck: ದುಬೈನ ‘ಹಿಂದ್ ಸಿಟಿ’ಗೂ ಭಾರತಕ್ಕೂ ನಂಟಿಲ್ಲ

Last Updated 7 ಫೆಬ್ರುವರಿ 2023, 1:03 IST
ಅಕ್ಷರ ಗಾತ್ರ

‘ಯುಎಇ ಪ್ರಧಾನಿ ಹಾಗೂ ದುಬೈನ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರು ‘ಅಲ್ ಮಿನ್‌ಹಾದ್’ ನಗರದ ಹೆಸರನ್ನು ‘ಹಿಂದ್ ಸಿಟಿ’ ಎಂಬುದಾಗಿ ಮರುನಾಮಕರಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಹಾಗೂ ಭಾರತವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದೇ ಇದಕ್ಕೆ ಕಾರಣ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಮಾನವತೆಗೆ ಭಾರತ ದೇಶ ಹಾಗೂ ಹಿಂದೂಗಳು ನೀಡಿರುವ ಕೊಡುಗೆಯನ್ನು ಗೌರವಿಸಿ, ದುಬೈ ದೊರೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ವಕ್ತಾರ ಆರ್‌.ಪಿ. ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ. ಆದರೆ, ಯುಎಇ ಸರ್ಕಾರದ ಆದೇಶದಲ್ಲಿ ಭಾರತ ಅಥವಾ ಭಾರತೀಯರ ಉಲ್ಲೇಖ ಇಲ್ಲ.

ಪ್ರಧಾನಿ ಮೋದಿ, ಭಾರತ ಹಾಗೂ ಭಾರತೀಯರನ್ನು ಉದ್ದೇಶಿಸಿ ಮರುನಾಮಕರಣ ಮಾಡಿಲ್ಲ ಎಂದು ‘ಪಿಟಿಐ’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಯುಎಇ ಸರ್ಕಾರವು ಜನವರಿ 29ರಂದು ಹೊರಡಿಸಿರುವ ಮರುನಾಮಕರಣ ಆದೇಶ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಯಾವ ಮಾಧ್ಯಮವೂ ಭಾರತ, ಹಿಂದೂಗಳು, ಪ್ರಧಾನಿ ಮೋದಿ ಅವರ ಹೆಸರನ್ನು ವರದಿಯಲ್ಲಿ ಪ್ರಸ್ತಾಪಿಸಿಲ್ಲ. ‘ಹಿಂದ್’ ಪದಕ್ಕೆ ಅರೇಬಿಕ್‌ನಲ್ಲಿ ಬೇರೆ ಬೇರೆ ಅರ್ಥಗಳಿವೆ. ಶೇಖ್ ಅವರ ಹಿರಿಯ ಪತ್ನಿಯ ಹೆಸರಿನಲ್ಲೂ ‘ಹಿಂದ್’ ಪದವಿದೆ. ಮರುನಾಮಕರಣಕ್ಕೆ ನಿಖರ ಕಾರಣವನ್ನು ಯುಎಇ ತಿಳಿಸಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಜೊತೆ ಇದನ್ನು ತಳಕು ಹಾಕುವುದು ದಾರಿತಪ್ಪಿಸುವ ಚರ್ಚೆ ಎಂದು ಪಿಟಿಐ ಅಭಿ‌ಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT