ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಾನ್‌ ಪಠಣ: ಖಾಸಗಿ ಶಾಲೆ ವಿರುದ್ಧ ಎಫ್‌ಐಆರ್‌

Last Updated 2 ಆಗಸ್ಟ್ 2022, 13:49 IST
ಅಕ್ಷರ ಗಾತ್ರ

ಕಾನ್ಪುರ (ಉತ್ತರ ಪ್ರದೇಶ) (ಪಿಟಿಐ): ಬೆಳಗಿನ ಪ್ರಾರ್ಥನೆ ವೇಳೆ ಕುರಾನ್‌ ಪಠಣ ಮಾಡುವಂತೆ ಮಕ್ಕಳಿಗೆ ಒತ್ತಾಯಪಡಿಸಲಾಗುತ್ತಿದೆ ಎಂದು ಪೋಷಕರೊಬ್ಬರು ಖಾಸಗಿ ಶಾಲೆಯೊಂದರ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಶಾಲೆಯ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಮಂಗಳವಾರ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಬಲಪಂಥೀಯ ಸಂಘಟನೆಗಳ ಸದಸ್ಯರು ಈ ಶಾಲೆಯ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಭಾರತೀಯ ದಂಡ ಸಂಹಿತೆ 295A (ಧಾರ್ಮಿಕ ಭಾವನೆಗೆ ಧಕ್ಕೆ), 5(1) (ಉತ್ತರ ಪ್ರದೇಶದ ಕಾನೂನುಬಾಹಿರ ಮತಾಂತರ ತಡೆ ಕಾಯ್ದೆ 2021) ಅಡಿಯಲ್ಲಿ ಪ್ಲೋರೆಟ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ವ್ಯವಸ್ಥಾಪಕ ನಿರ್ದೇಶಕ ಸುಮೀತ್‌ ಮಖಾನಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೋಷಕ ರವಿ ರಜಪೂತ್‌ ಎಂಬುವವರು ಈ ಕುರಿತು ದೂರು ನೀಡಿದ್ದರು’ ಎಂದು ಎಸಿಪಿ ನಿಶಾಂಕ್‌ ಶರ್ಮಾ ತಿಳಿಸಿದರು.

‘ಬೆಳಿಗಿನ ಪ್ರಾರ್ಥನೆ ವೇಳೆಯಲ್ಲಿ ಕುರಾನ್‌ ಪಠಣ ಮಾಡುವಂತಿಲ್ಲ ಎಂದು ವಿಶ್ವ ಹಿಂದೂ ಪರಿಷತ್‌ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದ ನಂತರ ಶಾಲೆಯಲ್ಲಿ ಕುರಾನ್‌ ಪಠಣ ಮಾಡುವುದನ್ನು ನಿಲ್ಲಿಸಲಾಗಿದೆ’ ಎಂದು ಶಾಲೆಯು ಸೋಮವಾರ ಘೋಷಿಸಿದೆ. ಶಾಲೆಯು ದಶಕಗಳಿಂದ ಈ ಅಭ್ಯಾಸವನ್ನು ಮುಂದುವರೆಸಿಕೊಂಡು ಬಂದಿತ್ತು.

‘ಎಲ್ಲಾ ಧರ್ಮವೂ ಒಂದೇ ಎನ್ನುವ ತತ್ವದಡಿಯಲ್ಲಿ, ಕುರಾನ್‌ ಪಠಣದ ಜತೆಯಲ್ಲಿ ಗಾಯತ್ರಿ ಮಂತ್ರ ಹಾಗೂ ಗುರ್ಬಾಣಿಯನ್ನೂ ಪಠಣ ಮಾಡಲಾಗುತ್ತಿತ್ತು’ ಎಂದು ಶಾಲೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT