ಸೋಮವಾರ, ಜೂನ್ 14, 2021
22 °C

ತನ್ನ ವಿರುದ್ಧ ದೂರಿಗೂ ಪಾಟ್ನಾಗೂ ಸಂಬಂಧವಿಲ್ಲ- ರಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್‌ ಅವರು ತನ್ನ ಮಗನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪಾಟ್ನಾದಲ್ಲಿ ದಾಖಲಿಸಿರುವ ದೂರು ಹಾಗೂ ಪಾಟ್ನಾದಲ್ಲಿ ನಡೆದಿರುವ ಯಾವುದೇ ಅಪರಾಧಕ್ಕೂ ಸಂಬಂಧವೇ ಇಲ್ಲ ಎಂದು ನಟಿ ರಿಯಾ ಚಕ್ರವರ್ತಿ ಮಂಗಳವಾರ ಸುಪ್ರಿಂ ಕೋರ್ಟ್‌ಗೆ ತಿಳಿಸಿದ್ದಾರೆ.

ನ್ಯಾಯಮೂರ್ತಿ ಹೃಷಿಕೇಶ್ ರಾಯ್ ನೇತೃತ್ವದ ಪೀಠದ ಎದುರು ನಟಿಯ ಪರವಾಗಿ ಹಾಜರಾಗಿದ್ದ ವಕೀಲ ಶ್ಯಾಮ್ ದಿವನ್ ಅವರು, ಬಿಹಾರದ ಹಸ್ತಕ್ಷೇಪ ಹಾಗೂ ಪ್ರಭಾವಕ್ಕೆ ಯಾವುದೇ ಕಾರಣಗಳಿಲ್ಲ. ಹೀಗಾಗಿ, ಈ ದೂರಿಗೆ ಸಂಬಂಧಿಸಿದಂತೆ ತಮಗೆ ಆತಂಕವಿದೆ ಎಂದು ಹೇಳಿದರು. 

ಪ್ರಕರಣದ ಘಟನಾವಳಿಯನ್ನು ವಿವರಿಸಿದ ಅವರು ಪಟ್ನಾದಲ್ಲಿ ಪ್ರಕರಣ ದಾಖಲಿಸುವಲ್ಲಿ 38 ದಿನ ವಿಳಂಬವಾಗಿದೆ. ರಜಪೂತ್ ಅವರ ತಂದೆ ದಾಖಲಿಸಿರುವ ದೂರಿನ ಎಲ್ಲ ಅಂಶಗಳು ಮುಂಬೈಗೆ ಸಂಬಂಧಿಸಿದ್ದಾಗಿವೆ. ಮುಂಬೈ ಪೊಲೀಸರು ಆಗಲೇ ಪ್ರಕರಣ ಸಂಬಂಧ 56 ಜನರ ಹೇಳಿಕೆ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಪ್ರತಿಭಾವಂತ ನಟನ ಆತ್ಮಹತ್ಯೆ ಹಿಂದಿನ ಕಾರಣಗಳು ಬಹಿರಂಗವಾಗಬೇಕು ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 5ರಂದು ಅಭಿಪ್ರಾಯಪಟ್ಟಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು