ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ವಿದೇಶಗಳಿಂದ ಬಂದ ಪರಿಹಾರ ಸಾಮಗ್ರಿ ರಾಜ್ಯಗಳಿಗೆ ಹಂಚಿಕೆ

Last Updated 4 ಮೇ 2021, 14:56 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ವಿರುದ್ಧ ಹೋರಾಡುತ್ತಿರುವ ದೇಶಕ್ಕೆ ಹಲವಾರು ರಾಷ್ಟ್ರಗಳಿಂದ ನೆರವು ಹರಿದು ಬಂದಿದೆ. ಈ ಪರಿಹಾರ ಸಾಮಗ್ರಿಗಳನ್ನು ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚು ಇರುವ ರಾಜ್ಯಗಳ ಅಗತ್ಯಗಳನ್ನು ಹಾಗೂ ಸಚಿವಾಲಯ ರೂಪಿಸಿರುವ ಮಾನದಂಡಗಳ ಆಧಾರದ ಮೇಲೆ ಈ ಪರಿಹಾರ ಸಾಮಗ್ರಿಗಳನ್ನು ಹಂಚಲಾಗಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

‘ಕೋವಿಡ್‌ ನಿರ್ವಹಣೆಯಲ್ಲಿ ಅಗತ್ಯವಿರುವ 40 ಲಕ್ಷ ವಸ್ತುಗಳನ್ನು 24 ವರ್ಗಗಳಾಗಿ ವಿಂಗಡಿಸಿ, 86 ಸಂಸ್ಥೆಗಳಿಗೆ ಹಂಚಲಾಗಿದೆ. ಆಮ್ಲಜನಕ ಕಾನ್ಸ್‌ಟ್ರೇಟರ್‌ಗಳು, ರೆಮ್‌ಡಿಸಿವಿರ್‌ ಹಾಗೂ ಫಾವಿಪಿರಾವಿರ್‌ ಔಷಧ, ವೈಯಕ್ತಿಕ ಸುರಕ್ಷತಾ ಕಿಟ್‌ಗಳು (ಪಿಪಿಇ ಕಿಟ್‌), ಎನ್‌–95 ಮಾಸ್ಕ್‌ಗಳು ಇವುಗಳಲ್ಲಿ ಸೇರಿವೆ’ ಎಂದು ಸಚಿವಾಲಯ ತಿಳಿಸಿದೆ.

ಈಶಾನ್ಯ ರಾಜ್ಯಗಳಿಗೆ ಆಮ್ಲಜನಕ ಹೊತ್ತ ಟ್ಯಾಂಕರ್‌ಗಳು ತಲುಪುವುದು ಕಷ್ಟ. ಹೀಗಾಗಿ ಇಂಥ ರಾಜ್ಯಗಳಿಗೆ ಆದ್ಯತೆ ಮೇಲೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ.

ವಿವಿಧ ದೇಶಗಳಿಂದ ಬರುವ ನೆರವನ್ನು ಸ್ವೀಕರಿಸುವ ಹೊಣೆಯನ್ನು ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿಗೆ ವಹಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT