ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ್‌ಪಾಲ್‌ ಸಿಂಗ್ ಓಡಾಟದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ

Last Updated 25 ಮಾರ್ಚ್ 2023, 15:51 IST
ಅಕ್ಷರ ಗಾತ್ರ

ಚಂಡೀಗಢ: ಸಿಖ್‌ ಮೂಲಭೂತವಾದಿ ಧರ್ಮ ಪ್ರಚಾರಕ ಹಾಗೂ ಖಾಲಿಸ್ತಾನ ಪರ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್‌ ಸಿಂಗ್, ಪಟಿಯಾಲದ ಸ್ಥಳವೊಂದರಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ಓಡಾಡುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದೆ.

ಈ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ಹರಿದಾಡಿದ್ದು, ಈ ದೃಶ್ಯ ಸೆರೆಯಾಗಿರುವುದು ಯಾವಾಗ ಎಂಬುದರ ಕುರಿತು‍ ಪೊಲೀಸರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

‘ವಾರಿಸ್‌ ಪಂಜಾಬ್‌ ದೇ’ ಸಂಘಟನೆಯ ಮುಖ್ಯಸ್ಥನಾಗಿರುವ ಅಮೃತ್‌ಪಾಲ್‌, ಬಿಳಿ ವಸ್ತ್ರದಿಂದ ತನ್ನ ಮುಖವನ್ನು ಮರೆಮಾಡಿಕೊಂಡು, ಕೈಯಲ್ಲಿ ಬ್ಯಾಗ್‌ವೊಂದನ್ನು ಹಿಡಿದು ಹೋಗುತ್ತಿರುವ ದೃಶ್ಯ ಮೊದಲ ವಿಡಿಯೊ ತುಣುಕಿನಲ್ಲಿದೆ. ಆತನ ಆಪ್ತ ಸಹಚರ ಪಪಲ್‌ಪ್ರೀತ್‌ ಸಿಂಗ್‌ ಕೂಡ ಜೊತೆಗಿರುವುದು ಈ ವಿಡಿಯೊದಲ್ಲಿ ಕಂಡುಬಂದಿದೆ.

ಮತ್ತೊಂದು ವಿಡಿಯೊ ತುಣುಕಿನಲ್ಲಿ ಅಮೃತ್‌ಪಾಲ್‌ ಕಂದು ಬಣ್ಣದ ಜಾಕೆಟ್ ಧರಿಸಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಾ ಅದೇ ಸ್ಥಳದಲ್ಲಿ ಏಕಾಂಗಿಯಾಗಿ ಅತ್ತಿಂದಿತ್ತ ಓಡಾಡುತ್ತಿರುವುದು ಕಂಡುಬಂದಿದೆ.

ಅಮೃತ್‌ಪಾಲ್‌ ಹಾಗೂ ಪಪಲ್‌ಪ್ರೀತ್‌ ಎಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಇನ್ನೂ ದೊರೆತಿಲ್ಲ. ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಶಾಹಬಾದ್‌ ಎಂಬಲ್ಲಿ ವಾಸವಿರುವ ಮಹಿಳೆಯೊಬ್ಬರು ಇವರಿಗೆ ಆಶ್ರಯ ನೀಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಬಲ್ಜಿತ್‌ ಕೌರ್‌ ಹೆಸರಿನ ಆ ಮಹಿಳೆಯನ್ನು ಗುರುವಾರ ವಶಕ್ಕೆ ಪಡೆದಿದ್ದ ಪಂಜಾಬ್‌ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

ಶಾಹಬಾದ್‌ ಬಳಿ ಅಮೃತ್‌ಪಾಲ್‌ ಓಡಾಡುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕ್ಯಾಮೆರಾದಿಂದ ಪಾರಾಗಲು ಆತ ಕೊಡೆಯೊಂದರಿಂದ ತನ್ನ ಮುಖವನ್ನು ಮರೆಮಾಡಿಕೊಂಡಿದ್ದ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ಹರಿದಾಡಿತ್ತು.

ಶುಕ್ರವಾರ ಹರಿದಾಡಿದ್ದ ಮತ್ತೊಂದು ವಿಡಿಯೊದಲ್ಲಿ ಅಮೃತ್‌ಪಾಲ್‌ ಕೊಡೆ ಹಿಡಿದುಕೊಂಡು ಶಾಹಬಾದ್‌ ಬಸ್‌ ನಿಲ್ದಾಣದ ಎದುರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಇತ್ತು.

‘ಅಮೃತ್‌ಪಾಲ್‌ನ ಸಹಚರನಿಂದ ಮೊಬೈಲ್‌ವೊಂದನ್ನು ಜಪ್ತಿ ಮಾಡಲಾಗಿತ್ತು. ಅದರಲ್ಲಿ ಖಾಲಿಸ್ತಾನದ ಧ್ವಜ, ಲಾಂಛನದ ಚಿತ್ರ ಪತ್ತೆಯಾಗಿದೆ. ‘ಆನಂದಪುರ ಖಾಲಿಸ್ತಾನ ಪಡೆ’ಗೆ ಸೇರಿದ ಯುವಕರು ಬಂದೂಕು ಹಿಡಿದು ತಾಲೀಮು ನಡೆಸುತ್ತಿರುವ ವಿಡಿಯೊ ಕೂಡ ಮೊಬೈಲ್‌ನಲ್ಲಿ ಇತ್ತು’ ಎಂದು ಪಂಜಾಬ್‌ ಪೊಲೀಸರು ಶುಕ್ರವಾರ ತಿಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT