ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ‘ಅಪರಾಧಿ ಬಚಾವೊ‘ ಮಿಷನ್‌! - ರಾಹುಲ್

ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ರಾಹುಲ್, ಪ್ರಿಯಾಂಕಾ ವಾಗ್ದಾಳಿ
Last Updated 18 ಅಕ್ಟೋಬರ್ 2020, 6:43 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಅಪರಾಧಿಗಳನ್ನು ರಕ್ಷಿಸುವಲ್ಲಿ ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಆರೋಪಿಸಿದ್ದಾರೆ.

ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಯನ್ನು ಬಿಜೆಪಿ ಶಾಸಕ, ಅವರ ಪುತ್ರ ಮತ್ತು ಬೆಂಬಲಿಗರು ಪೊಲೀಸ್ ವಶದಿಂದ ಬಲವಂತವಾಗಿ ಬಿಡಿಸಿದ ಪ್ರಕರಣದ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾಹುಲ್ ಮತ್ತು ಪ್ರಿಯಾಂಕಾ, ‘ಇವರು ಶುರು ಮಾಡಿದ್ದು; ಬೇಟಿ ಬಚಾವೊ(ಹೆಣ್ಣು ಮಕ್ಕಳನ್ನು ರಕ್ಷಿಸಿ) ಎಂದು. ಈಗ ನಡೆಯುತ್ತಿರುವುದು; ‘ಅಪರಾಧಿ ಬಚಾವೊ (ಅಪರಾಧಿ ರಕ್ಷಿಸಿ)‘ ಎಂದು ಉಲ್ಲೇಖಿಸಿದ್ದಾರೆ. ಈ ಟ್ವೀಟ್‌ ಜತೆಗೆ ಬಿಜೆಪಿ ಶಾಸಕ ಮತ್ತು ಅವರ ಪುತ್ರನ ಪ್ರಕರಣದ ಮಾಧ್ಯಮಗಳ ವರದಿಯನ್ನು ಟ್ಯಾಗ್ ಮಾಡಿದ್ದಾರೆ.

‘ಇದು ಯಾವ 'ಮಿಷನ್' ಅಡಿಯಲ್ಲಿ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳುತ್ತೀರಾ? 'ಬೇಟಿ ಬಚಾವೊ' (ಹೆಣ್ಣುಮಕ್ಕಳನ್ನು ಉಳಿಸಿ) ಅಥವಾ 'ಅಪರಾಧಿ ಬಚಾವೊ' (ಅಪರಾಧಿಗಳನ್ನು ಉಳಿಸಿ)?‘ ಎಂದುಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT