ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ವರ್ಷದ ಹಿಂದೆ ಗಂಡನನ್ನು ಕೊಂದು ಪ್ರಿಯಕರನ ಮನೆಯೊಳಗೆ ಹೂತು ಹಾಕಿದ್ದ ಪತ್ನಿ ಬಂಧನ

Last Updated 14 ನವೆಂಬರ್ 2022, 15:24 IST
ಅಕ್ಷರ ಗಾತ್ರ

ಗಾಜಿಯಾಬಾದ್‌: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ ಮನೆಯೊಳಗೆ ಹೂತು ಹಾಕಿದ್ದ ಮಹಿಳೆಯನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದಾರೆ.

ನಾಲ್ಕು ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಸೋಮವಾರ ಅರೋಪಿ ಸವಿತಾಳ ಬಂಧನವಾಗಿದೆ.

ಘಟನೆಯ ಹಿನ್ನೆಲೆ

ನಾಲ್ಕು ವರ್ಷಗಳ ಹಿಂದೆ ಸವಿತಾ, ತನ್ನ ಪ್ರಿಯಕರ ಚಂದ್ರವೀರ್‌ ಜತೆ ಸೇರಿಕೊಂಡು ಪತಿಯನ್ನು ಕೊಲೆ ಮಾಡಿದ್ದಳು. ಬಳಿಕ ಶವವನ್ನು ಚಂದ್ರವೀರ್‌ನ ಮನೆಯೊಳಗೆ ಏಳು ಅಡಿ ಗುಂಡಿ ತೋಡಿ ಹೂತು ಹಾಕಲಾಗಿತ್ತು. ಶವದ ಕೊಳೆತ ದುರ್ವಾಸನೆ ಬರಕೂಡದು ಎಂದು ಆಳವಾದ ಗುಂಡಿಯಲ್ಲಿ ಹೂತು ಹಾಕಿದ್ದರು. ಆದ ಬಳಿಕವೂ ಆ ಮನೆಯಲ್ಲಿ ವಾಸವಾಗಿದ್ದರು.

ಬಳಿಕ ಸವಿತಾ ಈ ಕೃತ್ಯವನ್ನು ತನ್ನ ಸಹೋದರನ ಮೇಲೆ ಹೊರಿಸಿದ್ದಳು.

ಕೃತ್ಯ ಎಸಗುವುದಕ್ಕೂ ಮುನ್ನ ಚಂದ್ರವೀರ್‌ ಮನೆಯಲ್ಲಿ ಏಳು ಅಡಿಯ ಗುಂಡಿ ತೋಡಲಾಗಿತ್ತು. ಬಳಿಕ ಗಂಡನನ್ನು ಅಪಹರಣ ಮಾಡಿ ಗುಂಡಿಕ್ಕಿ ಕೊಲೆ ಮಾಡಿ, ಹೂತು ಹಾಕಿದ್ದಾರೆ.

ಇದೀಗ ನಾಲ್ಕು ವರ್ಷಗಳ ಬಳಿಕ ಪ್ರಕರಣ ಬಯಲಾಗಿದ್ದು, ಹೂತು ಹಾಕಿದ್ದ ಜಾಗ‌ದಿಂದ ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಆಯುಧಗಳನ್ನು ಮುಟ್ಟುಗೋಲು ಹಾಕಲಾಗಿದೆ. ಒಂದು ಪಿಸ್ತೂಲು ಹಾಗೂ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT