ಶನಿವಾರ, ಜನವರಿ 28, 2023
18 °C

ಎರಡು ಉಗ್ರ ಸಂಘಟನೆಗಳ ನಿಷೇಧಿಸಿದ ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗಡಿಯಲ್ಲಿ ನಡೆಸಲಾಗುತ್ತಿರುವ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಕ್ರಮ ಜರುಗಿಸುವುದನ್ನು ಮುಂದುವರೆಸಿರುವ ಕೇಂದ್ರ ಸರ್ಕಾರವು ಲಷ್ಕರ್‌–ಇ–ತಯ್ಯಬಾ ಮತ್ತು ಜೈಷ್‌–ಇ–ಮೊಹಮ್ಮದ್‌ ಉಗ್ರ ಸಂಘಟನೆಗಳ ಬೆಂಬಲಿತ ಎರಡು ಸಂಘಟನೆಗಳನ್ನು  ನಿಷೇಧಿಸಿದೆ. ಕಳೆದ ನಾಲ್ಕು ದಿನಗಳಲ್ಲಿ ನಾಲ್ವರನ್ನು ‘ನಿರ್ದಿಷ್ಟ ಉಗ್ರ’ರೆಂದು ಘೋಷಿಸಿದೆ. 

ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರವು ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪುನರುಚ್ಚರಿಸುತ್ತಿದ್ದ ಬೆನ್ನಲ್ಲೇ ಉಗ್ರ ಸಂಘಟನೆಗಳು ಮತ್ತು ಉಗ್ರರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. 

ಜನವರಿ 4ರಂದು ಕೇಂದ್ರ ಗೃಹ ಸಚಿವಾಲಯವು ಕಾಶ್ಮೀರ ಮೂಲದ ಉಗ್ರ ಏಜಾಜ್‌ ಅಹ್ಮದ್‌ ಅಹಾಂಗಾರ್‌ ಎಂಬಾತನನ್ನು ‘ನಿರ್ದಿಷ್ಟ ಉಗ್ರ’ ಎಂದು ಕರೆದಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.