ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ವರ್ಗದ ಮಹಿಳೆಯರ ವೈದ್ಯಕೀಯ ಗರ್ಭಪಾತ ಅವಧಿ 24 ವಾರಕ್ಕೆ: ಅಧಿಸೂಚನೆ

Last Updated 13 ಅಕ್ಟೋಬರ್ 2021, 16:30 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ವರ್ಗಗಳ ಮಹಿಳೆಯರಿಗೆ ಗರ್ಭಪಾತದ ಅವಧಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸುವ ಹೊಸ ನಿಯಮಗಳನ್ನೊಳಗೊಂಡ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.

ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ನಿಯಮಗಳು, 2021 ಕಾಯ್ದೆ ಪ್ರಕಾರ, ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ, ಅಪ್ರಾಪ್ತ ವಯಸ್ಕರು, ಗರ್ಭಾವಸ್ಥೆಯ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಬದಲಾವಣೆ ಆದ ಮಹಿಳೆಯರು (ವಿಧವೆ ಮತ್ತು ವಿಚ್ಛೇದನ) ಮತ್ತು ದೈಹಿಕ ಅಂಗವಿಕಲರಿಗೆ ಗರ್ಭಪಾತದ ಅವಧಿಯನ್ನು 24 ವಾರಗಳಿಗೆ ಹೆಚ್ಚಿಸಲಾಗಿದೆ.

ಮಾನಸಿಕ ಅಸ್ವಸ್ಥ ಮಹಿಳೆಯರು, ಭ್ರೂಣದ ವಿರೂಪತೆಯ ಪ್ರಕರಣಗಳು ಮತ್ತು ಸರ್ಕಾರ ಘೋಷಿಸಿದ ತುರ್ತು ಪರಿಸ್ಥಿತಿ ಸಂದರ್ಭ ಗರ್ಭ ಧರಿಸಿದವರೂ ಸಹ ಈ ಹೊಸ ನಿಯಮದಡಿಯಲ್ಲಿ ಬರಲಿದ್ದಾರೆ.

ಮಾರ್ಚ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕಾರ ಪಡೆದ ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಕಾಯಿದೆ, 2021 ರ ಅಡಿಯಲ್ಲಿ ಹೊಸ ನಿಯಮಗಳು ಬರಲಿವೆ.

ಹೊಸ ನಿಯಮಗಳ ಪ್ರಕಾರ, ಭ್ರೂಣದ ವಿರೂಪತೆಯ ಪ್ರಕರಣಗಳಲ್ಲಿ 24 ವಾರಗಳ ನಂತರ ಗರ್ಭಾವಸ್ಥೆಯನ್ನು ಕೊನೆಗೊಳಿಸಬಹುದೇ ಎಂಬುದನ್ನು ನಿರ್ಧರಿಸಲು ರಾಜ್ಯ ಮಟ್ಟದ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲಾಗುವುದು.

ಮಹಿಳೆ ವೈದ್ಯಕೀಯ ಗರ್ಭಪಾತಕ್ಕೆ ಕೋರಿದರೆ ಆಕೆಯ ಮೆಡಿಕಲ್ ವರದಿಗಳನ್ನು ಪರೀಕ್ಷಿಸುವುದು. ಗರ್ಭಪಾತದ ಬಗ್ಗೆ ಮೂರು ದಿನಗಳಲ್ಲಿ ನಿರ್ಣಯೊಸುವುದು ವೈದ್ಯಕೀಯ ಮಂಡಳಿಯ ಕಾರ್ಯವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT