ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: 66 ಕೋಟಿಗೂ ಹೆಚ್ಚು ಡೋಸ್‌ಗಳಷ್ಟು ಲಸಿಕೆ ಖರೀದಿಸಲಿರುವ ಕೇಂದ್ರ

ಆಗಸ್ಟ್‌ – ಡಿಸೆಂಬರ್ ನಡುವೆ ಲಸಿಕೆಗಳ ಪೂರೈಕೆ
Last Updated 17 ಜುಲೈ 2021, 10:45 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ 66 ಕೋಟಿಗೂ ಹೆಚ್ಚು ಡೋಸ್‌ಗಳಷ್ಟು ’ಕೋವಿಶೀಲ್ಡ್‌’ ಮತ್ತು ’ಕೋವ್ಯಾಕ್ಸಿನ್‌’ ಲಸಿಕೆಗಳನ್ನು ಪರಿಷ್ಕೃತ ದರದಲ್ಲಿ ಖರೀದಿಸುತ್ತಿದ್ದು, ಈ ಲಸಿಕೆಗಳು ಆಗಸ್ಟ್‌ ಮತ್ತು ಡಿಸೆಂಬರ್ ನಡುವೆ ಪೂರೈಕೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ ಪಿಡುಗಿನ ವಿರುದ್ಧ ಹೋರಾಡಲು ನೀಡುತ್ತಿರುವ ಈ ಲಸಿಕೆಗಳ ಪರಿಷ್ಕೃತ ದರದ ಪ್ರಕಾರ ಕೋವಿಶೀಲ್ಡ್‌ ಪ್ರತಿ ಡೋಸ್‌ಗೆ ₹205 ಮತ್ತು ಕೋವ್ಯಾಕ್ಸಿನ್‌ ಪ್ರತಿ ಡೋಸ್‌ಗೆ ₹215 ನಿಗದಿಪಡಿಸಲಾಗಿದೆ.

ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದಿಂದ 37.5 ಕೋಟಿ ಡೋಸ್‌ಗಳಷ್ಟು ಕೋವಿಶೀಲ್ಡ್‌ ಮತ್ತು ಭಾರತ್ ಬಯೋಟೆಕ್‌ನಿಂದ 28.5 ಕೋಟಿ ಡೋಸ್‌ಗಳಷ್ಟು ಕೋವ್ಯಾಕ್ಸಿನ್‌ ಲಸಿಕೆಗಳನ್ನು ಖರೀದಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

’66 ಕೋಟಿ ಡೋಸ್‌ಗಳಷ್ಟು ಲಸಿಕೆಗಳ ಖರೀದಿಗೆ ಬೇಡಿಕೆ ಸಲ್ಲಿಸಲಾಗಿದೆ. ಈ ಲಸಿಕೆಗಳು ಪರಿಷ್ಕೃತ ದರದಲ್ಲಿ ಆಗಸ್ಟ್‌ ಮತ್ತು ಡಿಸೆಂಬರ್‌ ನಡುವೆ ಪೂರೈಕೆಯಾಗಲಿವೆ’ ಎಂದು ಮೂಲಗಳು ತಿಳಿಸಿವೆ. ತೆರಿಗೆ ಸೇರಿ ಕೋವಿಶೀಲ್ಡ್ ಪ್ರತಿ ಡೋಸ್‌ ದರ ₹215 ಮತ್ತು ಕೋವ್ಯಾಕ್ಸಿನ್ ಪ್ರತಿ ಡೋಸ್‌ಗೆ ₹225.75 ಆಗುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಹಿಂದೆ ಎರಡೂ ಕಂಪನಿಯ ಲಸಿಕೆಗಳನ್ನು ಒಂದು ಡೋಸ್‌ಗೆ ₹150 ದರದಲ್ಲಿ ಖರೀದಿ ಮಾಡುತ್ತಿತ್ತು. ’ಕೋವಿಡ್‌ ಲಸಿಕೆ ಖರೀದಿ ನೀತಿ’ ಪರಿಷ್ಕರಣೆಗೊಂಡ ನಂತರ, ದರಗಳೂ ಪರಿಷ್ಕೃತಗೊಂಡಿವೆ. ಈ ಪರಿಷ್ಕೃತ ದರಗಳು ಜೂನ್ 21ರಿಂದ ಜಾರಿಗೆ ಬಂದಿವೆ. ಈ ಹೊಸ ನೀತಿ ಪ್ರಕಾರ, ಔಷಧ ಕಂಪನಿ ಉತ್ಪಾದಿಸಿದ ಒಟ್ಟು ಲಸಿಕೆಗಳಲ್ಲಿ ಶೇ 75ರಷ್ಟನ್ನು ಸಚಿವಾಲಯ ಖರೀದಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT