‘ಜನ್ ಸಮರ್ಥ್‘ ಪೋರ್ಟಲ್ ಆರಂಭಕ್ಕೆ ಕೇಂದ್ರ ಸರ್ಕಾರ ಚಿಂತನೆ

ನವದೆಹಲಿ: ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಜಾರಿಗೊಳಿಸುತ್ತಿರುವ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತ್ವರಿತ ವಿತರಿಸಲು ನೆರವಾಗಲು ‘ಜನ್ ಸಮರ್ಥ್’ ಹೆಸರಿನಲ್ಲಿ ಪೋರ್ಟಲ್ ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಚಿಂತನೆಗೆ ಪೂರಕವಾಗಿ ಉದ್ದೇಶಿತ ಪೋರ್ಟಲ್‌ನಲ್ಲಿ ವಿವಿಧ 15 ಸರ್ಕಾರಿ ಯೋಜನೆಗಳ ಕುರಿತು ಫಲಾನುಭವಿಗಳಿಗೆ ಸೌಲಭ್ಯ, ಮಾಹಿತಿಯನ್ನು ಒದಗಿಸಲಾಗುತ್ತದೆ.
ಪ್ರಧಾನಮಂತ್ರಿ ಆವಾಸ್ ಯೋಜನಾ, ಕ್ರೆಡಿಟ್ ಆಧರಿತ ಬಂಡವಾಳ ಸಬ್ಸಿಡಿ ಯೋಜನೆಯನ್ನು ವಿವಿಧ ಸಚಿವಾಲಯಗಳು ಜಾರಿಗೊಳಿಸುತ್ತಿವೆ. ಯೋಜನೆಗಳ ಸ್ವರೂಪವನ್ನು ಆಧರಿಸಿ ಹಂತ–ಹಂತವಾಗಿ ಪೋರ್ಟಲ್ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರೇ ತಿಂಗಳಲ್ಲಿ ಕನ್ನಡ ಕಲಿತ ಕರ್ನಾಟಕದ ಕಲ್ಪನಾ ಸಾಧನೆಗೆ ಮೋದಿ ಮೆಚ್ಚುಗೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.