ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಸಿಜನ್‌ ಕಾನ್ಸನ್ಟ್ರೇಟರ್‌ಗಳಿಗೆ ತೆರಿಗೆ ವಿನಾಯಿತಿ ಸಾಧ್ಯತೆ

Last Updated 23 ಮೇ 2021, 16:20 IST
ಅಕ್ಷರ ಗಾತ್ರ

ನವದೆಹಲಿ: ವೈಯಕ್ತಿಕ ಬಳಕೆಗಾಗಿ ವಿದೇಶಗಳಿಂದ ತರಿಸಿಕೊಳ್ಳುವ ಆಮ್ಲಜನಕ ಸಾಂದ್ರಕಗಳಿಗೆ ಶೇಕಡ 12ರಷ್ಟು ತೆರಿಗೆ ವಿಧಿಸುವ ವಿಚಾರವಾಗಿ ಜಿಎಸ್‌ಟಿ ಮಂಡಳಿಯು ಇದೇ 28ರಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ವೈಯಕ್ತಿಕ ಬಳಕೆಗಾಗಿ ತರಿಸಿಕೊಳ್ಳುವ ಅಥವಾ ಉಡುಗೊರೆಯಾಗಿ ಪಡೆದುಕೊಂಡ ಆಮ್ಲಜನಕ ಸಾಂದ್ರಕಗಳಿಗೆ ಶೇ 12ರಷ್ಟು ತೆರಿಗೆ ವಿಧಿಸುವುದು ‘ಅಸಾಂವಿಧಾನಿಕ’ ಎಂದು ದೆಹಲಿ ಹೈಕೋರ್ಟ್‌ ಕಳೆದ ವಾರ ಹೇಳಿದೆ.

ಈ ತೆರಿಗೆಯನ್ನು ಇಲ್ಲವಾಗಿಸುವುದರಿಂದ ಸರ್ಕಾರಕ್ಕೆ ಆಗುವ ಆದಾಯ ನಷ್ಟ ಹೆಚ್ಚೇನೂ ಇರುವುದಿಲ್ಲ. ಹಾಗಾಗಿ, ಮಂಡಳಿಯು ಇಂತಹ ಆಮದುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗೆ ಇರಿಸಲು ತೀರ್ಮಾನಿಸುವ ಸಾಧ್ಯತೆ ಇದೆ ಎಂದು ತೆರಿಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT