ಗುರುವಾರ , ಜನವರಿ 28, 2021
27 °C

ಪ್ರಧಾನಿ ಕಚೇರಿ ಹೆಸರಲ್ಲಿ ಮೋಸ: ವೈದ್ಯನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಪ್ರಧಾನಿ ಕಚೇರಿಯ (ಪಿಎಂಒ) ಅಧಿಕಾರಿಗಳ ಹೆಸರಿನಲ್ಲಿ ಇಮೇಲ್ ವಿಳಾಸಗಳನ್ನು ಸೃಷ್ಟಿ ಮಾಡಿ, ತನ್ನ ದೂರುಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಗುಜರಾತ್‌ನ ಸರ್ಕಾರಿ ಅಧಿಕಾರಿಗಳಿಗೆ ಸೂಚಿಸುತ್ತಿದ್ದ ಆರೋಪದ ಮೇಲೆ ವೈದ್ಯರೊಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ.

ಅಹಮದಾಬಾದ್ ಸೈಬರ್ ಅಪರಾಧ ವಿಭಾಗವು ಡಾ.ವಿಜಯ್ ಪಾರಿಖ್ ಎಂಬುವವರನ್ನು ಅಮ್ರೆಲಿಯಲ್ಲಿರುವ ಅವರ ಮನೆಯಲ್ಲಿ ಬಂಧಿಸಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

ಇತ್ತೀಚೆಗೆ, ಗುಜರಾತ್‌ನ ಕೆಲ ಅಧಿಕಾರಿಗಳಿಗೆ, ಐಪಿಎಎಸ್‌ ಅಧಿಕಾರಿಗಳಿಗೆ ಪ್ರಧಾನ ಮಂತ್ರಿ ಕಚೇರಿಯದ್ದು ಎನ್ನಲಾದ ಇಮೇಲ್‌ಗಳು ಬಂದಿವೆ.

ಏನೆಂದು ಇಮೇಲ್‌?

'ಅಹಮದಾಬಾದ್‌ನ ಪರಿಮಳ್‌ ಗಾರ್ಡನ್‌ನ ನಿಶಿತ್‌ ಶಾ ಎಂಬುವವರಿಂದ ಪಾರಿಖ್‌ ಎಂಬುವವರು ಎರಡು ಕಚೇರಿಗಳನ್ನು ಖರೀದಿಸಿದ್ದಾರೆ. ಆದರೆ, ಅವುಗಳನ್ನು ಹಸ್ತಾಂತರಿಸದೇ ನಿಶಿತ್‌ ಶಾ ಎಂಬುವವರು ಮೋಸ ಮಾಡಿದ್ದಾರೆ. ನ್ಯಾಯಕ್ಕಾಗಿ ಪಾರಿಖ್ ಪ್ರಧಾನ ಮಂತ್ರಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಗುಜರಾತ್‌ನ ಅಧಿಕಾರಿಗಳು ಪಾರಿಖ್ ಅವರ ಅರ್ಜಿಯ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು ಮತ್ತು ಅವರು ಖರೀದಿಸಿರುವ ಕಚೇರಿಗಳನ್ನು ಅವರಿಗೆ ಕೊಡಿಸಲು ಸಹಾಯ ಮಾಡಬೇಕು. ಈ ಪ್ರಕ್ರಿಯೆ ಮೇಲೆ ಪ್ರಧಾನಿ ಕಚೇರಿ ನಿಗಾ ವಹಿಸುತ್ತದೆ' ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಆದರೆ, ಪಾರಿಖ್‌ ಅವರೇ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಮತ್ತು ಕಚೇರಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಈ ಇಮೇಲ್ ಐಡಿಗಳನ್ನು ಸೃಷ್ಟಿ ಮಾಡಿದ್ದಾರೆ ಎಂಬುದು ಸೈಬರ್ ಅಪರಾಧ ವಿಭಾಗದ ಪರಿಶೀಲನೆಯ ನಂತರ ಪತ್ತೆಯಾಗಿದೆ.

ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು