ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳ ಕೊಡುಗೆಗೆ ನಿರ್ಬಂಧ ಅಸಾಧ್ಯ: ಚುನಾವಣಾ ಆಯೋಗ

Last Updated 9 ಏಪ್ರಿಲ್ 2022, 20:13 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಯ ಮೊದಲು ಅಥವಾ ನಂತರ ಯಾವುದೇ ಉಚಿತ ಕೊಡುಗೆಗಳನ್ನು ನೀಡುವುದು ಅಥವಾ ವಿತರಿಸುವುದು ಸಂಬಂಧಪಟ್ಟ ಪಕ್ಷದ ನೀತಿ ನಿರ್ಧಾರವಾಗಿದೆ. ಅಂತಹ ನೀತಿಗಳು ಆರ್ಥಿಕವಾಗಿ ಲಾಭದಾಯಕವೇ ಅಥವಾ ಪ್ರತಿಕೂಲ ಪರಿಣಾಮ ಬೀರುತ್ತವೆಯೇ ಎಂಬುದರ ಬಗ್ಗೆ ಮತದಾರರು ನಿರ್ಧರಿಸಬೇಕು ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

‘ಆಯಾ ರಾಜ್ಯಗಳಲ್ಲಿ ಗೆಲ್ಲುವ ಪಕ್ಷಗಳ ನೀತಿಗಳು ಮತ್ತು ಸರ್ಕಾರವನ್ನು ರಚಿಸುವಾಗ ಅವರು ತೆಗೆದುಕೊಳ್ಳಬಹುದಾದ ನಿರ್ಧಾರಗಳನ್ನು ನಿಯಂತ್ರಿಸಲು ಚುನಾವಣಾ ಆಯೋಗದಿಂದ ಸಾಧ್ಯವಿಲ್ಲ’ ಎಂದು ಆಯೋಗವು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಚುನಾವಣಾ ವ್ಯವಸ್ಥೆಯಲ್ಲಿಸುಧಾರಣೆ ತರುವ ನಿಟ್ಟಿನಲ್ಲಿ 2016ರ ಡಿಸೆಂಬರ್‌ ತಿಂಗಳಲ್ಲಿ 47 ಪ್ರಸ್ತಾವಗಳನ್ನು ಕೇಂದ್ರಕ್ಕೆ ಕಳುಹಿಸ
ಲಾಗಿದೆ. ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸುವುದು ಅದರಲ್ಲಿ ಸೇರಿದೆ ಎಂದು ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT