ಶನಿವಾರ, ಸೆಪ್ಟೆಂಬರ್ 26, 2020
21 °C

ಯುವಕರು ಭಯೋತ್ಪಾದಕರಾಗದಂತೆ ತಡೆಯಿರಿ: ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಜಮ್ಮು ಮತ್ತು ಕಾಶ್ಮೀರದ ಯುವಕರು ಭಯೋತ್ಪಾದನೆಗೆ ಸೇರದಂತೆ ತಡೆಯಲು, ಅಲ್ಲಿನ ತಾಯಂದಿರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಸಲಹೆ ನೀಡಿದರು.

ಹೈದರಾಬಾದ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಐಪಿಎಸ್‌ ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿದರು.

ಕೊರೊನಾ ಪಿಡುಗಿನ ವೇಳೆ ಪೊಲೀಸರ ಮಾನವೀಯತೆಯನ್ನು ಜನರು ನೋಡಿದ್ದಾರೆ ಎಂದರು.

‘ಜಮ್ಮು–ಕಾಶ್ಮೀರದ ಜನರ ಮನಸ್ಸು ಬಹಳ ಸುಂದರವಾಗಿದೆ. ಅಲ್ಲಿನ ಜನರೊಂದಿಗೆ ನಾನು ನಿಕಟ ಸಂಪರ್ಕ ಹೊಂದಿದ್ದೇನೆ. ಅವರು ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾರೆ. ಹಾಗಾಗಿ, ಅಲ್ಲಿ ತಪ್ಪು ದಾರಿ ಹಿಡಿಯುವವರನ್ನು ನಾವು ತಡೆಯಬೇಕು. ಮಹಿಳಾ ಪೊಲೀಸ್‌ ಸಿಬ್ಬಂದಿಯಿಂದ ಈ ಕೆಲಸ ಸಾಧ್ಯ. ಯುವಕರು ಭಯೋತ್ಪಾದನೆಯತ್ತ ಸಾಗುವುದನ್ನು ತಾಯಂದಿರ ನೆರವಿನಿಂದ ತಡೆಯಬಹುದು. ಈ ಮೂಲಕ ಆರಂಭಿಕ ಹಂತದಲ್ಲೇ ಭಯೋತ್ಪಾದನೆಯನ್ನು ತಡೆಯಬಹುದು’ ಎಂದು ಅವರು ಕಿವಿಮಾತು  ಹೇಳಿದರು.

ಯೋಗ ಮತ್ತು ಪ್ರಾಣಾಯಾಮಗಳು ಒತ್ತಡವನ್ನು ನಿವಾರಿಸಲು ಉತ್ತಮ ಮಾರ್ಗಗಳಾಗಿವೆ ಎಂದು ಅವರು ಇದೇ ವೇಳೆ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು