ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪುಕೋಟೆ ಸ್ವಾತಂತ್ರ್ಯೋತ್ಸವಕ್ಕೆ 7 ಸಾವಿರ ಮಂದಿಗೆ ಆಹ್ವಾನ

Last Updated 13 ಆಗಸ್ಟ್ 2022, 16:15 IST
ಅಕ್ಷರ ಗಾತ್ರ

ನವದೆಹಲಿ:ಸ್ವಾತಂತ್ರ್ಯ ದಿನದಂದುಪ್ರಧಾನಿ ನರೇಂದ್ರ ಮೋದಿ ಅವರು ದೇಶ ಉದ್ದೇಶಿಸಿ ಮಾತನಾಡುವ ಕೆಂಪು ಕೋಟೆ ಪ್ರವೇಶ ದ್ವಾರದಲ್ಲಿ ಬಹು-ಪದರದ ಭದ್ರತಾ ವ್ಯವಸ್ಥೆ ಮಾಡಿದ್ದು, ಮುಖ ಗುರುತಿಸುವಿಕೆ ವ್ಯವಸ್ಥೆ (ಎಫ್‌ಆರ್‌ಎಸ್) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಸುಮಾರು 7 ಸಾವಿರ ಆಹ್ವಾನಿತರು ಕೆಂಪು ಕೋಟೆಗೆ ಆಗಮಿಸುತ್ತಾರೆ. 10 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸ್ಮಾರಕದ ಸುತ್ತಲೂ ಸೋಮವಾರ ನಿಯೋಜಿಸಲಾಗುವುದು.

ತ್ರಿವರ್ಣ ಧ್ವಜ ಹಾರಿಸುವವರೆಗೂ ಕೆಂಪು ಕೋಟೆಯ ಸುತ್ತಲಿನ ಐದು ಕಿ.ಮೀ ವ್ಯಾಪ್ತಿಯನ್ನು ‘ಗಾಳಿ ಪಟ ಹಾರಾಟ ನಿಷೇಧ ವಲಯ‘ ಎಂದು ಘೋಷಿಸಲಾಗಿದ್ದು, ಗಾಳಿ ಪಟ ಹಾರಿಸುವವರನ್ನು ಹಿಡಿಯಲು ಮತ್ತು ಸೂಕ್ಷ್ಮ ಸ್ಥಳಗಳಲ್ಲಿ 400 ಸಿಬ್ಬಂದಿಯನ್ನು ದೆಹಲಿ ಪೊಲೀಸರು ನಿಯೋಜಿಸಿದ್ದಾರೆ.ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಇತರ ಭದ್ರತಾ ಏಜೆನ್ಸಿಗಳಿಂದ ಡ್ರೋನ್ ನಿರೋಧಕ ವ್ಯವಸ್ಥೆ ಅಳವಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

‘ಕೆಂಪು ಕೋಟೆ ಮತ್ತು ಸುತ್ತಮುತ್ತ ಹೆಚ್ಚಿನ ರೆಸಲ್ಯೂಶನ್ ಭದ್ರತಾ ಕ್ಯಾಮೆರಾ ಅಳವಡಿಸಲಾಗಿದ್ದು, ಅವುಗಳ ದೃಶ್ಯಾವಳಿಗಳನ್ನು 24 ತಾಸು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈ ಬಾರಿ ಆಹ್ವಾನಿತರ ಸಂಖ್ಯೆ 7 ಸಾವಿರಕ್ಕೆ ಏರಿದೆ. ಮೊಘಲ್ ಯುಗ ಸ್ಮಾರಕ ಪ್ರವೇಶ ಬಳಿ ಎಫ್‌ಆರ್‌ಎಸ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಲಂಚ್ ಬಾಕ್ಸ್, ವಾಟರ್ ಬಾಟಲ್, ರಿಮೋಟ್ ಕಂಟ್ರೋಲ್ ಕಾರ್ ಕೀ, ಸಿಗರೇಟ್ ಲೈಟರ್, ಬ್ರೀಫ್ ಕೇಸ್, ಹ್ಯಾಂಡ್ ಬ್ಯಾಗ್, ಕ್ಯಾಮೆರಾ, ಬೈನಾಕ್ಯುಲರ್, ಛತ್ರಿ ಮತ್ತು ಅಂತಹುದೇ ವಸ್ತುಗಳನ್ನು ಕೆಂಪು ಕೋಟೆ ಆವರಣದೊಳಗೆ ಬಿಡುವುದಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT