ನವದೆಹಲಿ: ಆರು ದಿನಗಳ ನಂತರ ದೇಶದಲ್ಲಿ ‘ಕೋವಿಡ್–19‘ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಸದ್ಯ 4,04,958 ಸಕ್ರಿಯ ಪ್ರಕರಣಗಳಿವೆ ಎಂದುಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ 30,549 ಕೋವಿಡ್ ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 422 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,17,26,507 ಆಗಿದೆ. ಕೋವಿಡ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 4,25,195ಕ್ಕೆ ಏರಿದೆ. 422 ಮಂದಿಯಲ್ಲಿ ಕೇರಳದ 118 ಹಾಗೂ ಮಹಾರಾಷ್ಟ್ರದ 90 ಮಂದಿ ಸೇರಿದ್ದಾರೆ.

ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆ 3,08,96,354 ಕ್ಕೆ ಏರಿಕೆಯಾಗಿದೆ. ಪ್ರಕರಣದ ಸಾವಿನ ಪ್ರಮಾಣವು ಶೇ 1.34ರಷ್ಟಿದೆ.

ದೇಶದಾದ್ಯಂತ ಭಾನುವಾರ 16,49,295 ಮಂದಿಯನ್ನು ಕೋವಿಡ್ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ದೇಶದಲ್ಲಿ ಒಟ್ಟು 47,12,94,789ರಷ್ಟು ಜನರನ್ನು ಪರೀಕ್ಷಿಸಲಾಗಿದೆ. ಪ್ರತಿ ದಿನದ ಸೋಂಕು ದೃಢತೆಯ ಪ್ರಮಾಣ (ಪಾಸಿಟಿವಿಟಿ ರೇಟ್) ಶೇ 1.85ರಷ್ಟಿದೆ. ವಾರದ ಪಾಸಿಟಿವಿಟಿ ರೇಟ್ ಶೇ 2.39ರಷ್ಟಿದೆ.

ದೇಶದಲ್ಲಿ ಒಟ್ಟು 47.85 ಕೋಟಿ ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.