ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 93 ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ನೀಡಿಕೆ: ದಿನವೊಂದರ ಗರಿಷ್ಠ

Last Updated 27 ಆಗಸ್ಟ್ 2021, 16:25 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಶುಕ್ರವಾರ ಒಂದೇ ದಿನ 93 ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಇದು ಈವರೆಗೆ ದಿನವೊಂದರಲ್ಲಿ ನೀಡಿದ ಗರಿಷ್ಠ ಡೋಸ್ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಶುಕ್ರವಾರ ಸಂಜೆ 7 ಗಂಟೆವರೆಗಿನ ಅಂಕಿಅಂಶ ಪ್ರಕಾರ, ಈವರೆಗೆ ಒಟ್ಟು 62 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ದಿನದ ಅಂತಿಮ ಲೆಕ್ಕಾಚಾರ ತಡರಾತ್ರಿ ವೇಳೆಗೆ ದೊರೆಯಲಿದೆ ಎಂದೂ ಸಚಿವಾಲಯ ಹೇಳಿದೆ.

‘ಶುಕ್ರವಾರ ಇಲ್ಲಿವರೆಗೆ 90 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ದೇಶದ ನಾಗರಿಕರಿಗೆ ಅಭಿನಂದನೆಗಳು. ಲಸಿಕೆ ನೀಡಿಕೆಯ ಇಂದಿನ ಲೆಕ್ಕಾಚಾರ ಇನ್ನೂ ನಡೆಯುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ರಾತ್ರಿ 7.23ಕ್ಕೆ ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 17ರಂದು 88 ಲಕ್ಷ ಡೋಸ್ ಕೋವಿಡ್ ಲಸಿಕೆ ನೀಡಲಾಗಿತ್ತು. ಇದು ಈವರೆಗಿನ ದಿನವೊಂದರ ಗರಿಷ್ಠ ಸಂಖ್ಯೆಯಾಗಿತ್ತು.

ಮೂರನೇ ಹಂತದ ಲಸಿಕೆ ನೀಡಿಕೆ ಅಭಿಯಾನ ಆರಂಭಗೊಂಡ ಬಳಿಕ ಈವರೆಗೆ 18–44 ವರ್ಷ ವಯಸ್ಸಿನ 23,72,15,353 ಜನರು ಲಸಿಕೆಯ ಮೊದಲ ಡೋಸ್ ಪಡೆದದ್ದು, 2,45,60,807 ಮಂದಿ ಎರಡನೇ ಡೋಸ್ ಅನ್ನೂ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT