ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಸ್‌ಬಿಬಿ, ಬಿಎಫ್‌.7: ಪ್ರಕರಣಗಳ ಸಂಖ್ಯೆ ಹೆಚ್ಚಳ ಸಾಧ್ಯತೆ ಕ್ಷೀಣ

Last Updated 23 ಡಿಸೆಂಬರ್ 2022, 13:48 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದಲ್ಲಿ ಓಮೈಕ್ರಾನ್‌ನ ಉಪತಳಿಗಳಾದ ಎಕ್ಸ್‌ಬಿಬಿ ಹಾಗೂ ಬಿಎಫ್‌.7 ಸೋಂಕಿನ ಕೆಲ ಪ್ರಕರಣಗಳು ವರದಿಯಾಗಿವೆ. ಆದರೆ, ಈ ಉಪತಳಿಗಳಿಂದಾಗಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬರುವ ಸಾಧ್ಯತೆ ಕಡಿಮೆ’ ಎಂದು ಖ್ಯಾತ ವೈರಾಣುತಜ್ಞೆ ಗಗನದೀಪ್ ಕಾಂಗ್ ಶುಕ್ರವಾರ ಹೇಳಿದ್ದಾರೆ.

ಚೀನಾ ಹಾಗೂ ಇತರ ಕೆಲ ದೇಶಗಳಲ್ಲಿ ಓಮೈಕ್ರಾನ್‌ನ ಉಪತಳಿ ಬಿಎಫ್‌.7 ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಕಾಂಗ್‌ ಅವರು ಈ ಹೇಳಿಕೆ ನೀಡಿದ್ದಾರೆ.

‘ಎಕ್ಸ್‌ಬಿಬಿ, ಬಿಎಫ್‌.7 ಕೂಡ ಓಮೈಕ್ರಾನ್‌ನ ಇತರ ಉಪತಳಿಗಳಂತೆ ವರ್ತಿಸುತ್ತವೆ. ವ್ಯಕ್ತಿಯಲ್ಲಿರುವ ರೋಗನಿರೋಧಕ ಶಕ್ತಿಯಿಂದ ಪಾರಾಗಿ, ಸೋಂಕು ಹರಡಬಲ್ಲ ಶಕ್ತಿ ಹೊಂದಿವೆ. ಆದರೆ, ಇವು ಡೆಲ್ಟಾ ತಳಿಯಿಂದಾಗುವ ತೀವ್ರಸ್ವರೂಪದಷ್ಟು ಸೋಂಕನ್ನುಂಟು ಮಾಡುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಅವರು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್‌ ಕಾಲೇಜಿನ ಉದರ ಮತ್ತು ಕರುಳು ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ.

‘ಸದ್ಯ ಭಾರತದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ. ಆದರೆ, ಈ ವೈರಸ್‌ನ ವರ್ತನೆಯಲ್ಲಿ ಏನಾದರೂ ಬದಲಾವಣೆ ಆಗುತ್ತಿರುವ ಕುರಿತು ಸಿಗುವ ಸೂಚನೆಗಳ ಮೇಲೆ ನಿಗಾಇಡುವುದು ಮುಖ್ಯ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT