ನವದೆಹಲಿ: ಭಾರತವು ಭವಿಷ್ಯದ ಕುರಿತಾದ ದೃಷ್ಟಿಕೋನದ ದಿವಾಳಿತನ ಎದುರಿಸುತ್ತಿದೆ ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ನಾವು ಏಕಸಾಮ್ಯದ ವಿರುದ್ಧವಾಗಿದ್ದು, ನಿಷ್ಪಕ್ಷಪಾತದ ಪರವಾಗಿದ್ದೇವೆ ಎಂದಿದ್ದಾರೆ.

‘ನಮ್ಮ ದೇಶದ ಭವಿಷ್ಯವೇನು? ಎಂಬುದರ ಬಗ್ಗೆ ಭಾರತವು ದೃಷ್ಟಿಕೋನದ ದಿವಾಳಿತನ ಎದುರಿಸುತ್ತಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

'ನಾವು ಬೃಹತ್ ಏಕಸ್ವಾಮ್ಯದ ಕಲ್ಪನೆಗೆ ವಿರುದ್ಧವಾಗಿದ್ದೇವೆ. ನಾವು ರೈತರು ಅಥವಾ ಎಂಎಸ್ಎಂಇಗಳ ವಿರುದ್ಧದ ಅನ್ಯಾಯದ ವಿರುದ್ಧವಾಗಿದ್ದೇವೆ. ನ್ಯಾಯಸಮ್ಮತತೆ ಮೇಲುಗೈ ಸಾಧಿಸಲು ನಾವು ಕಾರ್ಯನಿರ್ವಹಿಸುತ್ತೇವೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷವು ದೇಶಕ್ಕೆ ಸೂಕ್ತ ದೃಷ್ಟಿಕೋನ ನೀಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ ಅವರು, ಜನರಲ್ಲಿ ದ್ವೇಷ ಮತ್ತು ವಿಭಜನೆಯನ್ನು ಉತ್ತೇಜಿಸುತ್ತಿದೆ ಎಂದು ಟೀಕಿಸಿದರು.

ಕೆಲ ಬೃಹತ್ ಉದ್ಯಮಿಗಳ ಅನುಕೂಲಕ್ಕಾಗಿ ಮಾತ್ರ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ ಎಂದೂ ಅವರು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.