ಗಾಂಧಿನಗರ (ಗುಜರಾತ್): ಕೊರೊನಾ ವೈರಸ್ ಹೊಸ ರೀತಿಯ ಸವಾಲಾಗಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಕೊರೊನಾ ಸೋಂಕಿನ ವಿರುದ್ಧ ಯೋಜಿತ ಹೋರಾಟವನ್ನು ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.

ಮಾನವ ಕುಲ ಎಂದೂ ಕಾಣದ ಹೊಸ ಸವಾಲು ಈ ಸೋಂಕು. ಆದರೂ ಭಾರತ ಇದನ್ನು ಚೆನ್ನಾಗಿ ನಿಭಾಯಿಸುತ್ತಿದೆ. ಭಾರತದ ಪ್ರಯತ್ನಕ್ಕೆ ಇಡೀ ವಿಶ್ವವೇ ಪ್ರಶಂಸೆ ವ್ಯಕ್ತಪಡಿಸಿದೆ. ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯುವ ತನಕ ಜನರು ಮುನ್ನಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಗಾಂಧಿನಗರದ ಲೋಕಸಭಾ ಸದಸ್ಯರಾದ ಶಾ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ₹134 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಡಿಜಿಟಲ್ ವೇದಿಕೆಮೂಲಕ ಗುರುವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರುಕೊರೊನಾ ‘ಸೋಂಕು ಗಾಂಧಿನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನಿಧಾನಗೊಳಿಸಿದ್ದರೂ, ಭಾರತದ ಅಭಿವೃದ್ಧಿಯನ್ನು ಹೆಚ್ಚು ಕಾಲ ತೆಡೆಹಿಡಿಯಲು ಸಾಧ್ಯವಿಲ್ಲ’ ಎಂದರು.

ಗಾಂಧಿನಗರ ಕ್ಷೇತ್ರದಲ್ಲಿಉದ್ಯಾನಗಳ ನವೀಕರಣ, ಗಾಂಧಿನಗರ ನಗರದ ಆಂತರಿಕ ರಸ್ತೆ ಮತ್ತುಪೆಥಾಪುರ-ನಾರ್ದಿಪುರ ರಸ್ತೆ ವಿಸ್ತರಣೆ ಕಾಮಗಾರಿ,ಎರಡು ಶಾಲೆಗಳಲ್ಲಿ ತರಗತಿ ಕೊಠಡಿಗಳ ನಿರ್ಮಾಣ ಯೋಜನೆಗಳಿಗಾಗಿ ₹134 ಹಣವನ್ನು ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.