ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ 30ರಂದು ಎಸ್‌ಸಿಒ ಶೃಂಗಸಭೆ: ಭಾರತದ ಆತಿಥ್ಯ

Last Updated 3 ಸೆಪ್ಟೆಂಬರ್ 2020, 14:08 IST
ಅಕ್ಷರ ಗಾತ್ರ

ನವದೆಹಲಿ:ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ಮಂಡಳಿಯ ಶೃಂಗಸಭೆ ನವೆಂಬರ್‌ 30ರಂದು ನಡೆಯಲಿದೆ. ಶೃಂಗಸಭೆಯ ಆತಿಥ್ಯವನ್ನು ಈ ಬಾರಿ ಭಾರತ ವಹಿಸಿಕೊಳ್ಳಲಿದೆ.

‘ಎಸ್‌ಸಿಒ ಸದಸ್ಯ ರಾಷ್ಟ್ರಗಳ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿರುವ ಭಾರತದಲ್ಲಿಯೇ ಈ ವರ್ಷದ ಶೃಂಗಸಭೆ ನಡೆಯಲಿದೆ. ಸಂಘಟನೆಯ ಸದಸ್ಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಕ್ಕೆ ಗಮನಾರ್ಹ ಕೊಡುಗೆ ನೀಡಲು ಭಾರತಕ್ಕೆ ಉತ್ತಮ ಅವಕಾಶ ಲಭಿಸಿದಂತಾಗಿದೆ‘ ಎಂದು ವಿದೇಶಾಂಗ ಸಚಿವಾಲಯದ (ಪಶ್ಚಿಮ) ಕಾರ್ಯದರ್ಶಿ ವಿಕಾಸ್‌ ಸ್ವರೂಪ್‌ ಹೇಳಿದರು.

ಭಾರತ ಮತ್ತು ಎಸ್‌ಸಿಒ ಸಂಬಂಧ ಕುರಿತ ಆನ್‌ಲೈನ್‌ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ‘ದೇಶದ ಭದ್ರತೆಗೆ ಎದುರಾಗಿರುವ ಸವಾಲುಗಳು, ಆರ್ಥಿಕ ಮತ್ತು ಇಂಧನ ಕ್ಷೇತ್ರಗಳಲ್ಲಿ ದೀರ್ಘಾವಧಿ ಸಂಬಂಧ ವೃದ್ಧಿಗೆ ಶೃಂಗಸಭೆಯಲ್ಲಿ ಒತ್ತು ನೀಡಲಾಗುವುದು’ ಎಂದರು.

‘ಎಸ್‌ಸಿಒ ಕಾರ್ಯಸೂಚಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸುವ ಆಶಯ ಇದೆ. ಸಂಘಟನೆಯ ಸದಸ್ಯ ರಾಷ್ಟ್ರಗಳ ಜನರ ಜೀವನ ಗುಣಮಟ್ಟ ಸುಧಾರಣೆ, ಅಭಿವೃದ್ಧಿ ಸಾಧಿಸುವುದೇ ಈ ಕಾರ್ಯಸೂಚಿಯ ಕೇಂದ್ರಬಿಂದುವಾಗಿರಬೇಕು ಎಂಬುದು ಸಹ ಭಾರತದ ಪ್ರತಿಪಾದನೆಯಾಗಿದೆ‘ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT