ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಾಸಾಗರದಲ್ಲಿ ಭಾರತ, ಅಮೆರಿಕ ಜಂಟಿ ಸಮರಾಭ್ಯಾಸಕ್ಕೆ ಚಾಲನೆ

ಪ್ರಾಬಲ್ಯ ವೃದ್ಧಿಸಿಕೊಳ್ಳುತ್ತಿರುವ ಚೀನಾಕ್ಕೆ ಸೆಡ್ಡು ಹೊಡೆವ ಕಾರ್ಯತಂತ್ರ
Last Updated 23 ಜೂನ್ 2021, 12:29 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಅಮೆರಿಕದ ನೌಕಾಪಡೆಗಳು ಹಿಂದೂ ಮಹಾಸಾಗರದಲ್ಲಿ ಎರಡು ದಿನಗಳ ಜಂಟಿ ಸಮರಾಭ್ಯಾಸಕ್ಕೆ ಬುಧವಾರ ಚಾಲನೆ ನೀಡಿದವು.

ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ವೃದ್ಧಿಸಿಕೊಳ್ಳಲು ಯತ್ನಿಸುತ್ತಿರುವ ಚೀನಾಕ್ಕೆ ಸೆಡ್ಡು ಹೊಡಯುವ ಕಾರ್ಯತಂತ್ರದ ಭಾಗವಾಗಿ ಈ ಸಮರಾಭ್ಯಾಸವನ್ನು ಹಮ್ಮಿಕೊಳ್ಳಲಾಗಿದೆ.

ಅಣ್ವಸ್ತ್ರ ಅಳವಡಿಸಿದ ಯುದ್ಧವಿಮಾನಗಳನ್ನು ಹೊತ್ತ ಹಡಗು ‘ಯುಎಸ್‌ಎಸ್‌ ರೊನಾಲ್ಡ್‌ ರೇಗನ್‌’, ‘ಎಫ್‌–18’ ಯುದ್ಧವಿಮಾನಗಳು, ಎಲ್ಲ ರೀತಿಯ ಹವಾಮಾನ ಪರಿಸ್ಥಿತಿಯಲ್ಲಿ ಕಾರ್ಯಾಚರಿಸಬಲ್ಲ ‘ಇ–2ಸಿ’ ಯುದ್ಧವಿಮಾನಗಳನ್ನು ಈ ತಾಲೀಮಿನಲ್ಲಿ ಅಮೆರಿಕ ನಿಯೋಜಿಸಿದೆ ಎಂದು ಮೂಲಗಳು ಹೇಳಿವೆ.

ಜಾಗ್ವಾರ್‌ ಮತ್ತು ಸುಖೋಯ್‌–30ಎಂಕೆಐ ಯುದ್ಧವಿಮಾನಗಳು, ಹಾರಾಟದ ಸಮಯದಲ್ಲಿಯೇಯುದ್ಧವಿಮಾನಗಳಿಗೆ ಇಂಧನ ಮರುಪೂರಣ ಮಾಡಬಲ್ಲ ‘ಐಎಲ್‌–78’ ವಿಮಾನಗಳು, ಐಎನ್‌ಎಸ್ ಕೊಚ್ಚಿ ಮತ್ತು ಐಎನ್‌ಎಸ್‌ ತೇಗ್‌ ಯುದ್ಧನೌಕೆಗಳನ್ನು ಭಾರತ ನಿಯೋಜಿಸಿದೆ.

ಅಲ್ಲದೇ, ಕಡಲ ಗಡಿಯಲ್ಲಿ ಕಣ್ಗಾವಲಿಡುವ ‘ಪಿ8ಐ’ ಯುದ್ಧವಿಮಾನಗಳು, ‘ಎಂಐಜಿ 29ಕೆ’ ಜೆಟ್‌ಗಳು ಸಹ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ ಎಂದು ಮೂಲಗಳು ಹೇಳಿವೆ.

‘ಭಾರತದ ನೌಕಾಪಡೆಯ ಯುದ್ಧನೌಕೆಗಳು, ಯುದ್ಧವಿಮಾನಗಳ ಜೊತೆ ವಾಯುಪಡೆಯ ಯುದ್ಧವಿಮಾನಗಳು ಸಹ ಈ ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸಿವೆ’ ಎಂದು ನೌಕಾಪಡೆಯ ವಕ್ತಾರ ಕಮಾಂಡರ್‌ ವಿವೇಕ್‌ ಮಧ್ವಾಲ್‌ ಹೇಳಿದ್ದಾರೆ.

‘ಸಮುದ್ರದಲ್ಲಿ ಕೈಗೊಳ್ಳುವ ಕಾರ್ಯಾಚರಣೆಯಲ್ಲಿ ಉಭಯ ದೇಶಗಳ ನೌಕಾಪಡೆಗಳು ಪಾಲ್ಗೊಳ್ಳುವುದು, ಆಮೂಲಕ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವುದೇ ಈ ಜಂಟಿ ಸಮಾರಾಭ್ಯಾಸದ ಉದ್ದೇಶ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT