ಮಂಗಳವಾರ, ಜೂನ್ 28, 2022
27 °C
ದರಕ್ಕೆ ನಿಯಂತ್ರಣ ಹೇರಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ

ಆಮ್ಲಜನಕ ಸಾಂದ್ರಕ ಲಾಭಕ್ಕೆ ಶೇ 70ರ ಮಿತಿ: ಕೇಂದ್ರ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಆಮ್ಲಜನಕ ಸಾಂದ್ರಕಗಳ ಬೆಲೆಯು ವಿಪರೀತ ಏರಿಕೆಯಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಅವುಗಳ ಮೇಲಿನ ಗರಿಷ್ಠ ಲಾಭಾಂಶವನ್ನು ಶೇ 70ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿದೆ.

‘ಇವುಗಳ ಬೆಲೆಯಲ್ಲಿ ಗರಿಷ್ಠ ಲಾಭಾಂಶದ ಪ್ರಮಾಣವನ್ನು ವಿತರಕರ ಮಟ್ಟದಲ್ಲಿ ಶೇ 70ಕ್ಕೆ ನಿಗದಿ ಮಾಡ
ಲಾಗಿದೆ. ಕೋವಿಡ್‌ ಎರಡನೆಯ ಅಲೆಯ ಕಾರಣದಿಂದ ಆಮ್ಲಜನಕ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಿದ ಪರಿಣಾಮ, ಸಾಂದ್ರಕಗಳ ಬೆಲೆಯೂ ವಿಪರೀತವಾಗಿ ಏರಿಕೆಯಾಗಿದೆ. ಆದ್ದರಿಂದ ಸರ್ಕಾರವು ಮಧ್ಯಪ್ರವೇಶ ಮಾಡಲು ತೀರ್ಮಾನಿಸಿದೆ’ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

‘ಸಚಿವಾಲಯವು ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಸದ್ಯ ವಿತರಕರ ಮಟ್ಟದಲ್ಲಿ ಆಮ್ಲಜನಕ ಸಾಂದ್ರಕಗಳ ಲಾಭಾಂಶದ ಪ್ರಮಾಣವುಶೇ 198ರಷ್ಟಿದೆ. ಇದನ್ನು ನಿಯಂತ್ರಿಸಲು ಔಷಧ (ಬೆಲೆ ನಿಯಂತ್ರಣ) ಆದೇಶ 2013ರ ಪ್ಯಾರ 19ರಲ್ಲಿ ನೀಡಲಾಗಿರುವ ಅಧಿಕಾರವನ್ನು ಬಳಸಿಕೊಂಡು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (ಎನ್‌ಪಿಪಿಎ) ಸಾಂದ್ರಕಗಳಗರಿಷ್ಠ ಲಾಭಾಂಶವನ್ನು ಶೇ 70ಕ್ಕೆ ಮಿತಿಗೊಳಿಸಿ ಆದೇಶ ನೀಡಿದೆ’ ಎಂದು ತಿಳಿಸಲಾಗಿದೆ.

ಈ ಆದೇಶದ ಆಧಾರದಲ್ಲಿ ಮೂರು ದಿನದೊಳಗೆ ಸಾಂದ್ರಕಗಳ ಗರಿಷ್ಠ ಮಾರಾಟ ಬೆಲೆಯನ್ನು ತಿಳಿಸುವಂತೆ ತಯಾರಕರು ಹಾಗೂ ಆಮದುದಾರರಿಗೆ ಎನ್‌ಪಿಪಿಎ ಸೂಚನೆ ನೀಡಿದೆ. ಸಾಂದ್ರಕಗಳ ಪರಿಷ್ಕೃತ ಗರಿಷ್ಠ ಮಾರಾಟ ಬೆಲೆಯನ್ನು ಒಂದು ವಾರದೊಳಗೆಪ್ರಕಟಿಸಲಾಗುವುದು. ಈಗ ಜಾರಿ ಮಾಡಿದ ಆದೇಶವು 2021ರ ನವೆಂಬರ್‌ 30ರವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು