ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬೆಟ್‌ ಚರ್ಚೆ: ಭಾರತ ಮೂಲದ ಉಜ್ರಾ ಜೆಯಾವಿಶೇಷ ಸಂಯೋಜಕಿ

Last Updated 21 ಡಿಸೆಂಬರ್ 2021, 11:45 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತ ಮೂಲದ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಉಜ್ರಾ ಜೆಯಾ ಅವರನ್ನು ಟಿಬೆಟ್‌ ಕುರಿತ ವಿಷಯಗಳ ಮೇಲ್ವಿಚಾರಣೆಗೆ ವಿಶೇಷ ಸಂಯೋಜಕಿಯನ್ನಾಗಿ ನೇಮಿಸಲಾಗಿದೆ.

ಟಿಬೆಟ್ ಕುರಿತು ಒಪ್ಪಂದಕ್ಕೆ ಬರಲು ಚೀನಾ ಮತ್ತು ದಲೈಲಾಮಾ ಅಥವಾ ಅವರ ಪ್ರತಿನಿಧಿಗಳ ಜೊತೆಗೆ ಚರ್ಚೆಗೆ ಪೂರಕ ವಾತಾವರಣ ರೂಪಿಸುವ ಹೊಣೆಯನ್ನು ಇವರಿಗೆ ವಹಿಸಲಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ, ಮಾನವ ಹಕ್ಕು ಕುರಿತು ನಾಗರಿಕ ಭದ್ರತೆ ವಿಭಾಗದ ಅಧೀನ ಕಾರ್ಯದರ್ಶಿಯೂ ಆದ ಅವರು, ಹಿಂದೆ ನವದೆಹಲಿಯಲ್ಲಿ ಕೆಲಸ ಮಾಡಿದ್ದರು. ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನೀತಿಯನ್ನು ಖಂಡಿಸಿ 2018ರಲ್ಲಿ ವಿದೇಶಾಂಗ ಸೇವೆಗೆ ರಾಜೀನಾಮೆ ಸಲ್ಲಿಸಿದ್ದರು.

ಟಿಬೆಟ್‌ನ ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಚೀನಾ ಹತ್ತಿಕ್ಕುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಚೀನಾ ತಳ್ಳಿಹಾಕಿದೆ. 2013ರಲ್ಲಿ ಅಧ್ಯಕ್ಷರಾದ ನಂತರ ಕ್ಸಿ ಜಿನ್‌ಪಿಂಗ್‌ ಅವರು ಟಿಬೆಟ್‌ ಮೇಲೆ ಪ್ರಾಬಲ್ಯ ಹೊಂದಲು ಒತ್ತು ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT