ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕೋವಿಡ್‌–19 ಮರಣ ಪ್ರಮಾಣ ಶೇ 1.52: ಕೇಂದ್ರ ಆರೋಗ್ಯ ಸಚಿವಾಲಯ

ಮಾ.22ರ ನಂತರದಲ್ಲಿ ದಾಖಲಾದ ಅತಿ ಕಡಿಮೆ ಮರಣ ಪ್ರಮಾಣ
Last Updated 16 ಅಕ್ಟೋಬರ್ 2020, 11:59 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಪ್ರಸ್ತುತ ಕೋವಿಡ್‌ ಮರಣ ಪ್ರಮಾಣ ಶೇ 1.52ರಷ್ಟಿದ್ದು, ಮಾ.22ರ ನಂತರ ದಾಖಲಾದ ಅತಿ ಕಡಿಮೆ ಮರಣ ಪ್ರಮಾಣ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

‘ಪ್ರತಿ 10 ಲಕ್ಷ ಜನರಲ್ಲಿ ಕೋವಿಡ್‌–19ಗೆ 81 ಜನರು ಮೃತಪಡುತ್ತಿದ್ದು, ಜಗತ್ತಿನಲ್ಲೇ ಅತಿ ಕಡಿಮೆ ಮರಣ ಪ್ರಮಾಣ ಇರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಅ.4ರ ನಂತರ ದೇಶದಲ್ಲಿ ಪ್ರತಿನಿತ್ಯ ಕೋವಿಡ್‌ಗೆ ಮೃತಪಡುತ್ತಿರುವವರ ಸಂಖ್ಯೆ 1 ಸಾವಿರಕ್ಕಿಂತ ಕಡಿಮೆ ಇದೆ ಎಂದು ಸಚಿವಾಲಯ ತಿಳಿಸಿದೆ.

‘ಕೋವಿಡ್‌ ಮರಣ ಪ್ರಮಾಣ ಕ್ರಮೇಣವಾಗಿ ಇಳಿಕೆಯಾಗುತ್ತಿದ್ದು, ಪ್ರತಿ 10 ಲಕ್ಷ ಜನರಲ್ಲಿ ಪುದುಚೇರಿಯಲ್ಲಿ 403, ಮಹಾರಾಷ್ಟ್ರದಲ್ಲಿ 335, ಗೋವಾದಲ್ಲಿ 331, ದೆಹಲಿಯಲ್ಲಿ 317, ಕರ್ನಾಟಕದಲ್ಲಿ 152, ತಮಿಳುನಾಡಿನಲ್ಲಿ 135 ಹಾಗೂ ಪಂಜಾಬ್‌ನಲ್ಲಿ 131 ಜನರು ಸೋಂಕಿಗೆ ಮೃತಪಡುತ್ತಿದ್ದಾರೆ. ಒಟ್ಟಾರೆ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ.

ಗುಣಮುಖರ ಸಂಖ್ಯೆ ಅಧಿಕ: ಶುಕ್ರವಾರ ಬೆಳಗ್ಗೆ 8ಗಂಟೆಯವರೆಗಿನ 24 ಗಂಟೆ ಅವಧಿಯಲ್ಲಿ ಕೋವಿಡ್‌–19ನಿಂದ 70,338 ಜನರು ಗುಣಮುಖರಾಗಿದ್ದು, 63,371 ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 895 ಜನರು ಮೃತಪಟ್ಟಿದ್ದು, ಈ ಪೈಕಿ 337 ಜನರು ಮಹಾರಾಷ್ಟ್ರದವರಾಗಿದ್ದಾರೆ. ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 64.53 ಲಕ್ಷ ದಾಟಿದ್ದು, ಇದು ಸಕ್ರಿಯ ಪ್ರಕರಣಗಳನ್ನೂ(56.49 ಲಕ್ಷ) ಮೀರಿಸಿದೆ.

‘ಒಟ್ಟು ಪ್ರಕರಣದ ಶೇ 10.92ರಷ್ಟೇ ಸಕ್ರಿಯ ಪ್ರಕರಣಗಳಿದ್ದು, ಗುಣಮುಖ ಪ್ರಮಾಣ ಶೇ 87.56ಕ್ಕೆ ಏರಿಕೆಯಾಗಿದೆ’ ಎಂದು ಸಚಿವಾಲಯ ತಿಳಿಸಿದೆ.

ಹೊಸ ಕೋವಿಡ್‌–19 ಪ್ರಕರಣಗಳಲ್ಲಿ ಶೇ 79 ಪ್ರಕರಣಗಳು 10 ರಾಜ್ಯಗಳಲ್ಲಿ ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ ನಿತ್ಯವೂ 10 ಸಾವಿರಕ್ಕಿಂತ ಅಧಿಕ ಹಾಗೂ ಕರ್ನಾಟಕಲ್ಲಿ 8 ಸಾವಿರಕ್ಕಿಂತಲೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT