ಇಸ್ರೊ: ಎಸ್‌ಎಸ್1 ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಬೆಂಗಳೂರು: ಇಸ್ರೋದ ಸಣ್ಣ ಉಪಗ್ರಹ ಉಡಾವಣಾ ವಾಹನಕ್ಕಾಗಿ (ಎಸ್‌ಎಸ್ಎಲ್‌ವಿ) ಹೊಸದಾಗಿ ಅಭಿವೃದ್ಧಿ ಪಡಿಸಲಾದ ವೇಗವರ್ಧಕ ಮೋಟಾರ್‌ನ (ಎಸ್‌ಎಸ್1) ಪರೀಕ್ಷಾರ್ಥ ಪ್ರಯೋಗವು ಸೋಮವಾರ ಯಶಸ್ವಿಯಾಗಿ ನೇರವೇರಿತು.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಇಸ್ರೊ ಮಾಹಿತಿ ನೀಡಿದೆ.
‘ಈ ಪರೀಕ್ಷೆಯು 2022ರ ಮೇ ತಿಂಗಳಲ್ಲಿ ನಿಗದಿಪಡಿಸಲಾಗಿರುವ ಎಸ್‌ಎಸ್‌ಎಲ್‌ವಿ (ಎಸ್‌ಎಸ್‌ಎಲ್‌ವಿ–ಡಿ1) ಮೊದಲ ಉಡಾವಣೆಯನ್ನು ಕೈಗೊಳ್ಳಲು ಸಾಕಷ್ಟು ವಿಶ್ವಾಸವನ್ನು ನೀಡಿದೆ’ ಎಂದೂ ಇಸ್ರೊ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.