ನವದೆಹಲಿ: ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮ ‘ಗಗನಯಾನ’ಕ್ಕೆ ಸಿದ್ಧತೆ ನಡೆಸುತ್ತಿರುವ ಇಸ್ರೊ, ಗಗನನೌಕೆ ವಿನ್ಯಾಸಕ್ಕೆ ವೈದ್ಯರ ನೆರವು ಪಡೆಯಲು ಮುಂದಾಗಿದೆ.

ಮಾನವನ ಮೇಲೆ ಗಗನನೌಕೆ ಬೀರುವ ಪರಿಣಾಮಗಳನ್ನು ತಿಳಿದುಕೊಂಡು, ಅದಕ್ಕೆ ಪೂರಕವಾಗಿ ಗಗನನೌಕೆಯನ್ನು ವಿನ್ಯಾಸಗೊಳಿಸುವ ಉದ್ದೇಶದಿಂದ ವೈದ್ಯರೊಂದಿಗೆ ವ್ಯಾಪಕ ಸಮಾಲೋಚನೆ ಕೈಗೊಳ್ಳಲಾಗಿದೆ ಎಂದು ಇಸ್ರೊ ಮುಖ್ಯಸ್ಥ ಎಸ್.ಸೋಮನಾಥ್ ತಿಳಿಸಿದ್ದಾರೆ.

ತುರ್ತು ವೈದ್ಯಕೀಯ ಸೇವೆಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆ ಕುರಿತು ಚರ್ಚಿಸಲು ತಜ್ಞವೈದ್ಯರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

‘ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮದ ಗಗನನೌಕೆಯನ್ನು ವಿನ್ಯಾಸಗೊಳಿಸುವ ಕಾರ್ಯದಲ್ಲಿ ವೈದ್ಯರ ನೆರವನ್ನು ಹೇಗೆ ಪಡೆಯಬಹುದು ಎಂಬ ಬಗ್ಗೆ ಚಿಂತನೆ ನಡೆದಿದೆ. ವೈದ್ಯರು ಹಾಗೂ ಎಂಜಿನಿಯರುಗಳ ನಡುವೆ ಈ ಕುರಿತು ಚರ್ಚೆಯೂ ನಡೆಯುತ್ತಿದೆ’ ಎಂದು ತಿಳಿಸಿದರು.

‘ಗಗನಯಾನ’ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ನಾಲ್ವರು ಗಗನಯಾನಿಗಳನ್ನು ಗಗನನೌಕೆಯ ಕಾಕ್‌ಪಿಟ್‌ನಲ್ಲಿ ಕುಳ್ಳಿರಿಸಲಾಗುತ್ತದೆ. ನೌಕೆಯಲ್ಲಿನ ಸಾಧನಗಳನ್ನು ಸಮರ್ಪಕವಾಗಿ ಜೋಡಿಸಲಾಗಿದೆಯೇ, ಬೆಳಕಿನ ವ್ಯವಸ್ಥೆ ಸರಿಯಾಗಿದೆಯೇ ಅಥವಾ ವಿವಿಧ ಉಪಕರಣಗಳ ಅಂಚುಗಳಿಂದಾಗಿ ತೊಂದರೆಯಾಗತ್ತಿದೆಯೇ ಎಂಬ ಬಗ್ಗೆ ಗಗನಯಾನಿಗಳಿಂದ ಮಾಹಿತಿ ಪಡೆಯಲಾಗುತ್ತದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.