ಸೋಮವಾರ, ಸೆಪ್ಟೆಂಬರ್ 26, 2022
20 °C

'ಆಜಾದ್ ಕಾಶ್ಮೀರ': ಹೇಳಿಕೆ ಹಿಂಪಡೆದ ಕೆ.ಟಿ.ಜಲೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿದ್ದ 'ಆಜಾದ್ ಕಾಶ್ಮೀರ' ಹೇಳಿಕೆಯನ್ನು ಕೇರಳದ ಶಾಸಕ ಕೆ.ಟಿ. ಜಲೀಲ್‌ ಅವರು ಶನಿವಾರ ಹಿಂಪಡೆದಿದ್ದಾರೆ.

'ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತ ಹೇಳಿಕೆಯು ತಪ್ಪು ತಿಳಿವಳಿಕೆಗೆ ಕಾರಣವಾಗಿತ್ತು ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿತ್ತು, ಈ ಕಾರಣಕ್ಕೆ ಅದನ್ನು ಹಿಂಪಡೆದುಕೊಳ್ಳುತ್ತೇನೆ' ಎಂದು ಅವರು ಹೇಳಿದ್ದಾರೆ.

ಜಲೀಲ್‌ ಅವರ ಹೇಳಿಕೆಯು ಸಿಪಿಎಂನ ನಿಲುವು ಅಲ್ಲ ಎಂದು ಕೇರಳದ ಸಚಿವ ಎಂ.ವಿ. ಗೋವಿಂದನ್‌ ಸ್ಪಷ್ಟಪಡಿಸಿದ ಬಳಿಕ ಜಲೀಲ್‌ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಜಲೀಲ್‌ ಅವರ ಹೇಳಿಕೆಗೆ ಭಾರಿ ಟೀಕೆ ವ್ಯಕ್ತವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು