ಶನಿವಾರ, ಮೇ 28, 2022
26 °C

ದಿ ಅನ್‌ಟೋಲ್ಡ್‌ ಕಾಶ್ಮೀರ್‌ ಫೈಲ್ಸ್‌: ಕಾಶ್ಮೀರ ಪೊಲೀಸರಿಂದ ವಿಡಿಯೊ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: 'ದಿ ಕಾಶ್ಮೀರ್‌ ಫೈಲ್ಸ್‌' ಸಿನಿಮಾದ ಬಳಿಕ ಜಮ್ಮು ಮತ್ತು ಕಾಶ್ಮೀರದ ಪೊಲೀಸರು 'ದಿ ಅನ್‌ಟೋಲ್ಡ್‌ ಕಾಶ್ಮೀರ್‌ ಫೈಲ್ಸ್‌' ಎಂಬ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

57 ಸೆಕೆಂಡುಗಳ ವಿಡಿಯೊದಲ್ಲಿ ಮಹಿಳೆಯ ಆರ್ತನಾದ ಸೇರಿದಂತೆ ಭಯೋತ್ಪಾದನೆ ಸಂದರ್ಭ ಕಾಶ್ಮೀರಿ ಪಂಡಿತರು ಅನುಭವಿಸಿದ ಕಷ್ಟಗಳ ಕುರಿತಾದ ಹಲವು ದೃಶ್ಯಗಳಿವೆ. ಹಿನ್ನೆಲೆಯಲ್ಲಿ ಕವಿ ಫೈಜ್‌ ಅಹ್ಮದ್‌ ಫೈಜ್‌ ಅವರ 'ಹಮ್‌ ದೇಖೆಂಗೆ' ಗೀತೆಯನ್ನು ಅಳವಡಿಸಲಾಗಿದೆ. 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದಲ್ಲೂ ಈ ಗೀತೆಯನ್ನು ಬಳಕೆ ಮಾಡಲಾಗಿದೆ.

'ಉಗ್ರರು ವಿಶೇಷ ಪೊಲೀಸ್‌ ಅಧಿಕಾರಿ ಇಶ್ಫಾಕ್‌ ಅಹಮದ್‌ ಹಾಗೂ ಆತನ ಸಹೋದರ ಉಮರ್‌ ಜಾನ್‌ ಅವರನ್ನು ಮನೆಗೆ ನುಗ್ಗಿ ಸಾಯಿಸಿದ್ದಾರೆ ಮತ್ತು ಈ ಕೊಲೆಗಳು ಶಾಂತಿ ಪ್ರಿಯ ಕಾಶ್ಮೀರಿಗಳ ಸರಣಿ ಹತ್ಯೆಯ ಸಾಲಿಗೆ ಸೇರಿವೆ' ಎಂಬ ಎರಡು ಉಲ್ಲೇಖಗಳು ವಿಡಿಯೊದಲ್ಲಿದೆ.

'ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ನಡೆಸಿದ ಹತ್ಯೆಯಲ್ಲಿ 20,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಾವು ಮಾತನಾಡುವ ಸಮಯವಿದು' ಎಂದಿರುವ ಮತ್ತೊಂದು ಸಾಲಿನ ಉಲ್ಲೇಖವು ವಿಡಿಯೊದಲ್ಲಿ.

'ಮೌನವಾಗಿರುವುದಿಲ್ಲ, ಕ್ಷಮಿಸುವುದಿಲ್ಲ. ಹಮ್‌ ಕಾಶ್ಮೀರ್‌ ಹೈ, ಹಮ್‌ ದೇಖೆಂಗೆ' ಎಂಬ ಸಾಲಿನೊಂದಿಗೆ ವಿಡಿಯೊ ಕೊನೆಯಾಗಿದೆ.

ಈ ವಿಡಿಯೊವನ್ನು ಮಾರ್ಚ್‌ 31ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದೆ. ಸುಮಾರು 1.65 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.

ಏಪ್ರಿಲ್‌ 4ರಂದು ವಲಸಿಗರು ಮತ್ತು ಕಾಶ್ಮೀರಿ ಪಂಡಿತರ ಮೇಲೆ ನೂತನ ದಾಳಿ ನಡೆದ ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.