ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಕೇಂದ್ರಗಳಲ್ಲಿ ಅನುಮತಿ ಇಲ್ಲದ ಧ್ವನಿವರ್ಧಕ ತೆರವು: ನಿರ್ಣಯ ಅಂಗೀಕಾರ

ಜಮ್ಮು ಮಹಾನಗರ ಪಾಲಿಕೆ
Last Updated 17 ಮೇ 2022, 15:42 IST
ಅಕ್ಷರ ಗಾತ್ರ

ಜಮ್ಮು: ಅನುಮತಿ ಇಲ್ಲದೇ ಧಾರ್ಮಿಕ ಕೇಂದ್ರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ತೆರವುಗೊಳಿಸುವ ಸಂಬಂಧ ಮಂಗಳವಾರ ಜಮ್ಮು ಮಹಾನಗರ ಪಾಲಿಕೆಯು(ಜೆಎಂಸಿ) ನಿರ್ಣಯ ಕೈಗೊಂಡಿದೆ.

ಬಿಜೆಪಿ ಸದಸ್ಯ ನರೋತಮ್‌ ಶರ್ಮಾ ಅವರು ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಬಾಂಕ್ವೆಟ್‌ ಹಾಲ್‌ ಸಮುದಾಯ ಭವನಗಳು, ಮಸೀದಿಗಳು, ದೇವಸ್ಥಾನಗಳು, ಗುರುದ್ವಾರ, ಚರ್ಚ್‌ಗಳು ಮತ್ತು ಇತರ ಧಾರ್ಮಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೇ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸುವ ನಿರ್ಣಯವನ್ನು ಮಂಡಿಸಿದ್ದು, ಇತರೆ ಸದಸ್ಯರ ವಿರೋಧದ ನಡುವೆಯು ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಿದೆ. ಈ ನಿರ್ಣಯದ ಪ್ರಕಾರ ಜಮ್ಮು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರ ನಡುವೆ ಯಾವುದೇ ಧ್ವನಿವರ್ಧಕ ಸಾಧನಗಳನ್ನು ನುಡಿಸುವಂತಿಲ್ಲ.

‘ ಅಕ್ರಮ ಧ್ವನಿವರ್ಧಕಗಳ ಬಗೆಗಿನ ನಿರ್ಣಯವನ್ನು ಮಂಗಳವಾರದ ಕೌನ್ಸಿಲ್‌ ಸಭೆಯಲ್ಲಿ ಪಾಲಿಕೆಯ ಸದಸ್ಯರೊಬ್ಬರು ಮಂಡಿಸಿದ್ದು, ಅದನ್ನು ಅಂಗೀಕರಿಸಲಾಗಿದೆ’ ಎಂದು ಮೇಯರ್ ಚಂದರ್ ಮೋಹನ್ ಗುಪ್ತಾ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT