ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾರ್ಖಂಡ್‌: ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ

Last Updated 26 ಸೆಪ್ಟೆಂಬರ್ 2022, 13:55 IST
ಅಕ್ಷರ ಗಾತ್ರ

ಮೇದಿನಿನಗರ, ಜಾರ್ಖಂಡ್‌: 22 ವರ್ಷ ವಯಸ್ಸಿನ ಗರ್ಭಿಣಿಯ ಮೇಲೆ ಆಕೆಯ ಗಂಡನ ಎದುರೇ ಆರು ಜನರ ಗುಂಪು ಅತ್ಯಾಚಾರ ಎಸಗಿದೆ ಎನ್ನಲಾದ ಘಟನೆ ಜಾರ್ಖಂಡ್‌ನ ಪಲಾಮು ಜಿಲ್ಲೆಯ ಬಕೊರಿಯ ಭಲುವಾಹಿ ಕಣಿವೆ ಬಳಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಮೊಕದ್ದಮೆಗೆ ಸಂಬಂಧಿಸಿ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂತ್ರಸ್ತೆ ಮೂರು ತಿಂಗಳ ಗರ್ಭಿಣಿ ಆಗಿದ್ದಳು. ಆಕೆಯನ್ನು ಮೇದಿನಿನಗರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಸ್ಥಿತಿ ಈಗಲೂ ಗಂಭೀರವಾಗಿಯೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಗರ್ಭಕ್ಕೆ ಸಮಸ್ಯೆ ಆಗಿರುವ ಕುರಿತು ಸದ್ಯ ಮಾಹಿತಿ ಲಭ್ಯವಾಗಿಲ್ಲ. ವಿಧಿವಿಜ್ಞಾನ ತಂಡವು ಸ್ಥಳಕ್ಕೆ ತೆರಳಿ ಮಾದರಿಗಳನ್ನು ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಮಹಿಳೆಯ ಗಂಡ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.‘ಮನೆಯಲ್ಲಿ ಜಗಳ ಮಾಡಿಕೊಂಡ ಪತ್ನಿ ಲಾತೆಹಾರ್‌ ಜಿಲ್ಲೆಯಲ್ಲಿದ್ದ ತನ್ನ ತಂದೆಯ ಮನೆಗೆ ನಡೆದುಕೊಂಡು ಹೊರಟಿದ್ದರು. ಸಂಬಂಧಿಯೊಂದಿಗೆ ಬೈಕ್‌ ಏರಿ ಹುಡುಕುವಾಗ ಆಕೆ ರಾಷ್ಟ್ರೀಯ ಹೆದ್ದಾರಿ 39ರಲ್ಲಿ ಪತ್ತೆಯಾದಳು. ಆಕೆಯ ಮನವೊಲಿಸಿ ಮನೆಗೆ ಕರೆದುಕೊಂಡು ಬರಲು ಪ್ರಯತ್ನಿಸುತ್ತಿದ್ದ ವೇಳೆ ಬೈಕ್‌ಗಳಲ್ಲಿ ಬಂದ ಆರು ಮಂದಿ ನನ್ನನ್ನು ಮತ್ತು ಸಂಬಂಧಿಯನ್ನು ಥಳಿಸಿ ಆಕೆಯನ್ನು ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋದರು. ಅವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನ್ನು ನಾನು ನೋಡಿದ್ದೇನೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

ಅತ್ಯಾಚಾರ ಆರೋಪಿಗಳಲ್ಲಿ ಇಬ್ಬರು ನನಗೆ ಪರಿಚಿತರು ಎಂದೂ ಅವರು ಹೇಳಿದ್ದಾರೆ.

‘ಆರೋಪಿಗಳು ಥಳಿಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ನಾನು ಸ್ಥಳಕ್ಕೆ ತೆರಳಿದಾದ ನನ್ನ ಪತ್ನಿಯನ್ನು ಬೇರೆಡೆಗೆ ಕರೆದುಕೊಂಡು ಹೋಗಲು ಅವರು ಪ್ರಯತ್ನಿಸುತ್ತಿದ್ದರು. ಅವರು ಹೋಗುತ್ತಿದ್ದ ಬೈಕ್‌ ಎದುರಿಗೆ ಮತ್ತೊಂದು ವಾಹನ ಬಂದದ್ದನ್ನು ನೋಡಿ ನನ್ನ ಪತ್ನಿ ಸಹಾಯಕ್ಕಾಗಿ ಕಿರುಚಿದ ಕಾರಣ ಸ್ಥಳೀಯರು ಆಕೆಯ ಸಹಾಯಕ್ಕೆ ಧಾವಿಸಿದರು. ಅವರೇ ಇಬ್ಬರು ಆರೋಪಿಗಳನ್ನು ಹಿಡಿದರು’ ಎಂದು ದೂರಿನಲ್ಲಿ ಹೇಳಿದ್ದಾರೆ.

ಶನಿವಾರವೇ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಇನ್ನು ನಾಲ್ವರು ಆರೋಪಿಗಳನ್ನು ಭಾನುವಾರ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT