ಶುಕ್ರವಾರ, ಮೇ 20, 2022
23 °C

ಕೊಲೆ ಪ್ರಕರಣ: ವಿನಯ ಕುಲಕರ್ಣಿ ಇತರ ಇಬ್ಬರ ವಿರುದ್ಧ ಸಿಬಿಐ ಆರೋಪಪಟ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಮಾಜಿ ಸಚಿವ ವಿನಯ ಕುಲಕರ್ಣಿ ಮತ್ತು ಇತರ ಇಬ್ಬರ ವಿರುದ್ಧ ಆರೋಪಪಟ್ಟಿಯನ್ನು ದಾಖಲಿಸಿದೆ.

ಕುಲಕರ್ಣಿ ಅವರಲ್ಲದೇ, ಚಂದ್ರಶೇಖರ ಇಂಡಿ ಮತ್ತು ಶಿವಾನಂದ ಬಿರಾದಾರ್ ವಿರುದ್ಧ ಧಾರವಾಡದಲ್ಲಿ ಇರುವ ವಿಶೇಷ ಕೋರ್ಟ್ ನಲ್ಲಿ ಆರೋಪಪ‌ಟ್ಟಿ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

2016ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಆರೋಪಿಗಳು ಮೃತನ ಜೊತೆಗೆ ರಾಜಕೀಯ ಮತ್ತು ವೈಯಕ್ತಿಕ ದ್ವೇಷ ಹೊಂದಿದ್ದರು. ಮಾಜಿ ಸಚಿವರು ತನ್ನ ಸಹಚರರ ಜೊತೆಗೂಡಿ ಸಂಚು ನಡೆಸಿದ್ದರು. ಇದರ ಭಾಗವಾಗಿ ಒಬ್ಬ ಸಹಚರ ಕೃತ್ಯ ಎಸಗಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹೇಳಲಾಗಿದೆ.

ಬಳಿಕ ಭೂ ವಿವಾದದ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎಂದು ಬಿಂಬಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸಿಬಿಐ ಮೂರು ನಾಡ ಪಿಸ್ತೂಲ್‌ ಅನ್ನೂ ಜಪ್ತಿ ಮಾಡಿದೆ ಎಂದು ಸಿಬಿಐ ವಕ್ತಾರರಾದ ಆರ್.ಸಿ.ಜೋಷಿ ಅವರು ತಿಳಿಸಿದರು.

ಕೃತ್ಯ ಎಸಗಿದವರು ಬೆಂಗಳೂರಿನಿಂದ ಬಂದಿದ್ದು, ಕುಲಕರ್ಣಿ ಅವರ ಆಪ್ತರು ಮಾಲೀಕರಾಗಿದ್ದ ರೆಸಾರ್ಟ್‌ ಒಂದರಲ್ಲಿ ಜೂನ್ 7, 2016ರಂದು ತಂಗಿದ್ದರು. ಅದೇ ದಿನ ಕೊಲೆ ಎಸಗಲು ಮೊದಲ ಯತ್ನವೂ ನಡೆದಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು