ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ದುರ್ವರ್ತನೆ ದೂರು ಪರಿಗಣಿಸುವುದಿಲ್ಲ: ಕೇರಳ ಹೈಕೋರ್ಟ್

Last Updated 2 ಸೆಪ್ಟೆಂಬರ್ 2021, 12:51 IST
ಅಕ್ಷರ ಗಾತ್ರ

ಕೊಚ್ಚಿ: ಮರಡು ಫ್ಲಾಟ್ಸ್‌ ನೆಲಸಮ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ಹಾಲಿ ನ್ಯಾಯಮೂರ್ತಿ ಮತ್ತು ಇಬ್ಬರು ವಿಶ್ರಾಂತ ನ್ಯಾಯಮೂರ್ತಿಗಳ ವಿರುದ್ಧ ನ್ಯಾಯಾಂಗ ದುರ್ವರ್ತನೆ ಕುರಿತ ಆರೋಪದ ಅಂಶಗಳನ್ನು ಪರಿಗಣಿಸುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ.

‘ಇಂಥ ಅರ್ಜಿಗಳನ್ನು ವಿಚಾರಣೆಗೆ ಪುರಸ್ಕರಿಸಿದರೆ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುವುದಾದರೂ ಹೇಗೆ?’ ಅವರು ಹೇಗೆ ತೀರ್ಪು ನೀಡಬಲ್ಲರು? ಅವರೂ ಕೂಡ ಮನುಷ್ಯರೇ’ ಎಂದು ನ್ಯಾಯಮೂರ್ತಿ ಪಿ.ಬಿ.ಸುರೇಶ್‌ ಕುಮಾರ್‌ ಅವರು ಈ ಕುರಿತ ಅರ್ಜಿಗಳ ಅಲ್ಪ ಕಾಲದ ವಿಚಾರಣೆಯ ಸಂದರ್ಭದಲ್ಲಿ ಹೇಳಿದರು.

ಅರ್ಜಿಗಳು ವಿಚಾರಣೆಗೆ ಅರ್ಹವೇ ಎಂದಷ್ಟೇ ಪರಿಶೀಲಿಸಲಾಗುವುದು. ನ್ಯಾಯಾಂಗದ ದುರ್ವರ್ತನೆ ಆರೋಪ ಕುರಿತ ಅಂಶಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸೆ.6ಕ್ಕೆ ವಿಚಾರಣೆ ಮುಂದೂಡಲಾಯಿತು.

ವಕೀಲ ಯಶವಂತ ಶೆಣೈ ಅವರ ಮೂಲಕ ಸಲ್ಲಿಸಿದ್ದ ಎರಡೂ ಅರ್ಜಿಗಳಲ್ಲಿ, ನ್ಯಾಯಾಂಗದ ದುರ್ವರ್ತನೆ ಕುರಿತ ತಮ್ಮ ಆರೋಪಗಳ ತನಿಖೆಗೆ ಸಮಿತಿ ರಚಿಸಬೇಕು ಎಂದು ಕೋರಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT