ಬುಧವಾರ, ಜೂನ್ 29, 2022
23 °C

ಅಲೀಗಡ ಕಳ್ಳಬಟ್ಟಿ ಪ್ರಕರಣ: ಪ್ರಮುಖ ಆರೋಪಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ನೊಯಿಡಾ/ಅಲೀಗಡ: ‘ಅಲೀಗಡ ಕಳ್ಳಬಟ್ಟಿ ಪ್ರಕರಣದ ಪ್ರಮುಖ ಆರೋಪಿಯನ್ನು ಭಾನುವಾರ ಮುಂಜಾನೆ ಬಂಧಿಸಲಾಗಿದೆ. ಕಳೆದ ತಿಂಗಳು ಸಂಭವಿಸಿದ ಈ ದುರಂತದಲ್ಲಿ 35 ಮಂದಿ ಮೃತಪಟ್ಟಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಉತ್ತರ ಪ್ರದೇಶದ ಬುಲಂದ್‌ಶಹರ್ ಗಡಿಯಲ್ಲಿ ಆರೋಪಿ ರಿಶಿ ಶರ್ಮಾನನ್ನು ಬಂಧಿಸಲಾಗಿದೆ. ಈತನ ತಲೆಗೆ ಸರ್ಕಾರವು ₹1 ಲಕ್ಷ ಬಹುಮಾನ ಘೋಷಿಸಿತ್ತು’ ಎಂದು ಅಲೀಗಡದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ಕಲಾನಿಧಿ ನೈಥಾನಿ ಅವರು ಹೇಳಿದರು.

‘ಅಲೀಗಡದಲ್ಲಿ ಇತ್ತೀಚೆಗೆ ಎರಡು ವಿಭಿನ್ನ ಸಂದರ್ಭಗಳಲ್ಲಿ ಕಳ್ಳಬಟ್ಟಿ ಸೇವಿಸಿ, ಸುಮಾರು 50 ಮಂದಿ ಮೃತಪಟ್ಟಿದ್ದರು. ಇನ್ನೂ 50 ಮಂದಿಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಹಾಗಾಗಿ ಮೃತರ ಸಂಖ್ಯೆ 100ಕ್ಕೆ ತಲುಪುವ ಸಾಧ್ಯತೆಗಳಿವೆ’ ಎಂದು ಅಧಿಕಾರಿಗಳು ತಿಳಿಸಿದರು.

ಈ ಹಿಂದೆ, ಆರೋಪಿಗಳಾದ ವಿಪಿನ್‌ ಶರ್ಮಾ ಮತ್ತು ರಿಷಿ ಶರ್ಮಾನ ಸಹೋದರ ಮನೀಶ್‌ ಶರ್ಮಾನನ್ನು ‍ಪೊಲೀಸರು ಬಂಧಿಸಿದ್ದರು.

‘ಕಳ್ಳಬಟ್ಟಿ ದುರಂತಕ್ಕೆ ಸಂಬಂಧಿಸಿದಂತೆ ಈವರೆಗೆ ಅಲೀಗಡದಲ್ಲಿ 17 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು,  61 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರು ರಾಜ್ಯಗಳಲ್ಲಿ ಪೊಲೀಸರ ತಂಡಗಳು ತನಿಖೆ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ’ ಎಂದು ಜಿಲ್ಲಾ ಪೊಲೀಸರ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು