ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ರಾಯಗಢ ಕರಾವಳಿ ಪ್ರದೇಶದಲ್ಲಿ 8 ಶವ ಪತ್ತೆ

Last Updated 23 ಮೇ 2021, 8:01 IST
ಅಕ್ಷರ ಗಾತ್ರ

ಮುಂಬೈ: ‘ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಕರಾವಳಿ ಪ್ರದೇಶ ಸೇರಿದಂತೆ ಮೂರು ಸ್ಥಳಗಳಲ್ಲಿ 8 ಅಪರಿಚಿತ ಶವಗಳು ಪತ್ತೆಯಾಗಿವೆ. ತೌತೆ ಚಂಡಮಾರುತದ ಪ್ರಭಾವಕ್ಕೆ ಸಿಲುಕಿ ಮುಳುಗಿರುವ ಪಿ–305 ಬಾರ್ಜ್‌ನಲ್ಲಿದ್ದ ಸಂತ್ರಸ್ತರ ಮೃತದೇಹಗಳಾಗಿರಬಹುದು’ ಎಂದು ಪೊಲೀಸರು ಶಂಕಿಸಿದ್ದಾರೆ.

‘ಇದರಲ್ಲಿ ಮಾಂಡ್ವಾದಲ್ಲಿ ಐದು, ಅಲಿಬಾಗ್‌ನಲ್ಲಿ ಎರಡು ಮತ್ತು ಮುರುಡ್‌ನಲ್ಲಿ ಒಂದು ಶವ ಶನಿವಾರ ಪತ್ತೆಯಾಗಿದೆ. ಮೃತದೇಹಗಳ ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ನಾವು ಸ್ಥಳೀಯ ಅಧಿಕಾರಿಗಳು ಮತ್ತು ರಾಜ್ಯ ಪೊಲೀಸರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ಧೇವೆ’ ಎಂದು ರಾಯಗಡದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ತೌತೆ ಚಂಡಮಾರುತದ ಹೊಡೆತದಿಂದ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ಪಿ305 ಬಾರ್ಜ್‌ ಶನಿವಾರ ಸಮುದ್ರದ ದಡದಲ್ಲಿ ಪತ್ತೆಯಾಗಿತ್ತು. ಶೋಧ ಕಾರ್ಯಾಚರಣೆ ವೇಳೆ ಶನಿವಾರ ಮತ್ತೆ ಆರು ಶವಗಳು ಸಿಕ್ಕಿವೆ.ಈ ಮೂಲಕ ಬಾರ್ಜ್‌ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಇನ್ನೂ 9 ಸಿಬ್ಬಂದಿ ನಾಪತ್ತೆಯಾಗಿದ್ದಾರೆ’ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.

ಬಾರ್ಜ್‌ನಲ್ಲಿದ್ದ 261 ಸಿಬ್ಬಂದಿ ಪೈಕಿ ಇದುವರೆಗೆ 186 ಮಂದಿಯನ್ನು ರಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT